ಮುತಾಲಿಕ್ ಬಂಧನಕ್ಕೆ ಅಂಜುಮನ್ ಸಂಸ್ಥೆ ಆಗ್ರಹ

0
8

ಹುಬ್ಬಳ್ಳಿ: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಆಗ್ರಹಿಸಿ ಅಂಜುಮನ್ ಇ ಇಸ್ಲಾಂ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಆಚರಿಸುತ್ತಿರುವ ಗಣೇಶೋತ್ಸವ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸುವಾಗ ಮುತಾಲಿಕ್ ಅವರು ಮುಸ್ಲಿಂ ಸಮಾಜದ ಬಗ್ಗೆ ನಿಂದನೆ ಮಾಡಿದ್ದಾರೆ. ಅಲ್ಲದೇ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

Previous articleಪ್ರಚೋದನಕಾರಿ ಭಾಷಣ: ಮುತಾಲಿಕ್ ವಿರುದ್ಧ ಪ್ರಕರಣ
Next articleಗಣೇಶ ಪೆಂಡಾಲ್ ಮೇಲೆ ಗುಟ್ಕಾ ಜಾಹೀರಾತು: ಆಕ್ರೋಶ