ಮಾನಸಿಕ ಅಸ್ವಸ್ಥ ನೀರಲ್ಲಿ ಮುಳುಗಿ ಸಾವು

0
11

ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಡೆಂಪೋ ಡೇರಿ ಹಿಂಬಾಗದಲ್ಲಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
34 ವರ್ಷದ ಬನಹಟ್ಟಿಯ ಬಸವರಾಜ ರಾಜಶೇಖರ ಚಿಂಚೋರ ಎಂಬಾತನೇ ಮೃತನಾದ ವ್ಯಕ್ತಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ ಮಾನಸಿಕ ಅಸ್ವಸ್ಥ ಹಾಗು ಮೂರ್ಛೆ ರೋಗ ಆಗಾಗ್ಗೆ ಬರುತ್ತಿತ್ತೆಂದು ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶನಿವಾರ ಮಾರ್ಚ್ 4 ರಂದು ಮನೆಯಿಂದ ತೆರಳಿದ ಬಸವರಾಜ ಮರುದಿನ ರವಿವಾರ ಕೃಷ್ಣಾ ನದಿ ಹಿನ್ನೀರಿನಲ್ಲಿ ಈತನ ಶವ ಪತ್ತೆಯಾಗಿದ್ದು, ಪೊಲೀಸರು ಶವವನ್ನು ಹಿನ್ನೀರಿನಿಂದ ಹೊರತೆಗೆದು ತನಿಖೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಮಾನಸಿಕ ಅಸ್ವಸ್ಥ ಹಾಗು ಮೂರ್ಛೆ ರೋಗದಿಂದಲೇ ನೀರಿಗೆ ಬಿದ್ದು ಸಾವನಪ್ಪಿದ್ದಾರೆಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದು, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleರಾಗಾ ದೇಶದ ಮರ್ಯಾದೆ ಕಳೆಯುತ್ತಿದ್ದಾರೆ: ಪ್ರಲ್ಹಾದ್ ಜೋಶಿ ಟೀಕೆ
Next articleಶ್ರೀಶೈಲ ಮಲ್ಲಿಕಾರ್ಜುನ ರಥಯಾತ್ರೆಯಲ್ಲಿ ಹರಿದು ಬಂದ ಜನಸಾಗರ