`ಮಾದಲಿ’ಯಲ್ಲಿ ಮೂಡಿ ಬಂದ ನಾಗಲಿಂಗಜ್ಜನ ಮೂರ್ತಿ

0
29

ನವಲಗುಂದ: ಪ್ರತಿವರ್ಷದಂತೆ ಈ ವರ್ಷವು ನವಲಗುಂದದ ಆರಾಧ್ಯ ದೈವ ಶ್ರೀ ಅಜಾತ ನಾಗಲಿಂಗ ಸ್ವಾಮಿಯ ೧೪೪ನೇ ಜಾತ್ರಾ ಮಹೋತ್ಸವದ ಅಂಗವಾಗಿ, ಅಜ್ಜನ ಮಠದಲ್ಲಿ ಸಿಹಿ ತಿಂಡಿಯ ಮಾದಲಿಯನ್ನು ತಯಾರಿಸಿದ್ದು, ಮಾದಲಿಯಲ್ಲಿ ಶ್ರೀ ಅಜಾತ ನಾಗಲಿಂಗ ಸ್ವಾಮಿಯ ಮೂರ್ತಿಯನ್ನು ಭಕ್ತಾದಿಗಳು ತಯಾರಿಸಿದ್ದು ವಿಶೇಷವಾಗಿತ್ತು.
ಮಾದಲಿಯಲ್ಲಿ ತಯಾರಿಸಿದ ಶ್ರೀ ಅಜಾತ ನಾಗಲಿಂಗ ಸ್ವಾಮಿಯ ಮೂರ್ತಿಗೆ ಪೂಜೆ ಸಲ್ಲಿಸಿದ ನಂತರ ರಾಜ್ಯ ಹೊರ ರಾಜ್ಯದಿಂದ ಬಂದ ಭಕ್ತರಿಗೆ ಅನ್ನ ಸಾರು, ಬದನೇಕಾಯಿ ಪಲ್ಯ ಜೊತೆಗೆ ಮಾದಲಿ ಪ್ರಸಾದವನ್ನು ವಿತರಿಸಲಾಯಿತು.

Previous articleಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ
Next articleಸೆಕ್ಯೂರಿಟಿ ಗಾರ್ಡ್ ಕೂತಲ್ಲೇ ಹೃದಯಾಘಾತದಿಂದ ನಿಧನ