ಮಾಜಿ ಸಚಿವ ನಾಗೇಂದ್ರ ಆಪ್ತರ ಮೇಲೆ ಮತ್ತೆ‌ ಇಡಿ ದಾಳಿ

0
17

ಬಳ್ಳಾರಿ : ವಾಲ್ಮಿಕಿ ಅಭಿವೃದ್ಧಿ ನಿಗಮ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ‌,‌ ಸದ್ಯ ಜೈಲಿನಲ್ಲಿರುವ ಬಿ.ನಾಗೇಂದ್ರ ಅವರ ಸಂಬಂಧಿಕರು, ಆಪ್ತರ‌ ಮೇಲೆ ಇಡಿ‌ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಳ್ಳಾರಿ, ಕೊಪ್ಪಳ ರಾಯಚೂರಿನಲ್ಲಿರುವ ಆಪ್ತರ ಮೇಲೆ ಇಡಿ ಅಧಿಕಾರಿಗಳ ದಾಳಿ ಮಾಡಿದ್ದಾರೆ. ಬಳ್ಳಾರಿಯಲ್ಲಿ ನಾಗೇಂದ್ರ ಅವರ ಸಂಬಂಧಿ ಯರ್ರಿಸ್ವಾಮಿ, ಈರಣ್ಣ, ಅಲ್ಲಭಕಾಶ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಜಾರ್ಜ್ ಶೀಟ್ ಸಲ್ಲಿಕೆಗೆ ಮುನ್ನ ಇಡಿ ದಾಳಿ ಮಾಡಿರುವುದು‌ ಕೂತೊಹಲ ಮೂಡಿಸಿದೆ. ಬೆಳಗ್ಗೆಯೇ ದಾಳಿ‌ ಮಾಡಿರುವ ಅಧಿಕಾರಿಗಳು ಹಲವು ದಾಖಲೆಗಳ‌ ಹುಡುಕಾಟ ಆರಂಭಿಸಿದ್ದಾರೆ.

Previous articleಬಳ್ಳಾರಿ ಜೈಲು ಸುತ್ತಲೂ ಬಿಗಿ ಭದ್ರತೆ
Next articleಬಳ್ಳಾರಿ ಕೇಂದ್ರಕಾರಗೃಹಕ್ಕೆ ಎಸ್ಪಿ ದಿಢೀರ್ ಭೇಟಿ