ನಾನಿನ್ನೂ ಜೀವಂತವಾಗಿದ್ದೇನೆ: ಹೀತ್ ಸ್ಟ್ರೀಕ್

0
9

ಜಿಂಬಾಬ್ವೆಯ ಮಾಜಿ ನಾಯಕ ಹಾಗೂ ಆಲ್​ರೌಂಡರ್ ಹೀತ್ ಸ್ಟ್ರೀಕ್ ಕ್ಯಾನ್ಸರ್​ನಿಂದ ವಿಧಿವಶರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ತಿಳಿದುಬಂದಿದೆ. ಈ ಸುದ್ದಿಯನ್ನು ಸ್ವತಃ ಹೀತ್ ಸ್ಟ್ರೀಕ್ ಅವರೇ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಹೀತ್ ಸ್ಟ್ರೀಕ್, ನಾನು ಇನ್ನು ಜೀವಂತವಾಗಿದ್ದೇನೆ ಎಂದಿದ್ದಾರೆ. ಪ್ರಸ್ತುತ ಹೀತ್ ಸ್ಟ್ರೀಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ
ವಾಸ್ತವವಾಗಿ ಮಂಗಳವಾರ ತಡರಾತ್ರಿ, ಅವರ ಸಹ ಆಟಗಾರ ಹೆನ್ರಿ ಒಲಂಗಾ ಅವರು, ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಆ ಬಳಿಕ ಸ್ಟ್ರೀಕ್ ನಿಧನದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಹೆನ್ರಿ ಒಲಂಗಾ ಅವರು ಇದೀಗ ತಾವು ಮೊದಲು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದು, ಹೊಸ ಟ್ವೀಟ್ನಲ್ಲಿ ಸ್ಟ್ರೀಕ್ ಅವರೊಂದಿಗಿನ ಸಂಭಾಷಣೆಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.

Previous articleಹಿಂದೆ ಆಪರೇಶನ್ ಕಮಲ ಮಾಡಿದವರಿಗೆ ನಾಚಿಕೆಯಾಗಿಲ್ಲವೇ?
Next articleಕಾವೇರಿ ಸರ್ವಪಕ್ಷ ಸಭೆ ಜನರ ಒಕ್ಕೊರಲ ಧ್ವನಿ