ಮಹಿಳೆಯರು ಸುರಕ್ಷಿತವಾಗಿ ಮನೆಗೆ ಬರಬೇಕೆಂದರೆ ಬಿಜೆಪಿಗೆ ಮತ ಹಾಕಿ

0
7
ಬೊಮ್ಮಾಯಿ

ಹಾವೇರಿ: ನಿಮ್ಮ ಮನೆಯ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಬೇಕೆಂದರೆ ಬಿಜೆಪಿಗೆ ಮತ ಹಾಕಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಬ್ಯಾಡಗಿ ವಿಧಾನಸಭಾ ಕ್ಷೇತ್ತದ ಹಿರೇ ಅಣಜಿ, ಸೂಡಂಬಿ, ಗಾಳಪೂಜಿ, ಹಿರೇಹಳ್ಳಿ ಗ್ರಾಮದಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ಮಾಡಿ, ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ನಮ್ಮ ತಾಯಂದಿರು, ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರಲು ಬಿಜೆಪಿಗೆ ಮತ ಹಾಕಿ. ಅವರು ಆತಂಕದಲ್ಲಿಯೇ ಇರಬೇಕೆಂದರೆ ಕಾಂಗ್ರೆಸ್‌ಗೆ ಮತ ಹಾಕಿ ಎಂದರು.
ರೈತರ ಕಿಸಾನ್ ಸಮ್ಮಾನ ಯೋಜನೆ ಮುಂದುವರೆಯಬೇಕೆಂದರೆ ಬಿಜೆಪಿಗೆ ಹಾಕಿ, ರೈತ ವಿದ್ಯಾನಿಧಿ ಯೋಜನೆ ಮತ್ತೆ ಬರಬೇಕು ಎಂದರೆ ಬಿಜೆಪಿಗೆ ಮತ ಹಾಕಿ, ಕೊವಿಡ್ ಸಂದರ್ಭದಲ್ಲಿ ಮೋದಿಯವರು ಲಸಿಕೆ ಹಾಕಿಸಿ ಜೀವ ಉಳಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟರು. ಈಗಲೂ ಮೋದಿಯವರು ಐದು ಕೆಜಿ ಕೊಡುತ್ತಿದ್ದಾರೆ. ಮೋದಿಯವರ ಅಕ್ಕಿ, ಕಾಂಗ್ರೆಸ್ ಭಾಗ್ಯ ಎಂದು ಹೇಳಿಕೊಳ್ಳುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ಟಿಸಿಗಳನ್ನು ನಮ್ಮ ಅವಧಿಯಲ್ಲಿ 25. ಸಾವಿರಕ್ಕೆ ಕೊಡುತ್ತಿದ್ದೇವು. ಈಗ ಎರಡೂವರೆ ಲಕ್ಷ ರೂ. ಹಾಕುತ್ತಿದ್ದಾರೆ ಎಂದರು.

Previous articleರಾಜ್ಯದಲ್ಲಿ ಇರೋದು ಬರೀ ಗ್ಯಾರಂಟಿ ಅಲೆ ಮಾತ್ರ
Next articleಸಿಬಿಐಗೆ ವಹಿಸಿದರೆ ಮಾತ್ರ ನೇಹಾ ಸಾವಿಗೆ ನ್ಯಾಯ