ಮಹದಾಯಿ ವಿಚಾರಣೆ ಮುಂದಿನ ವಾರ ಸಾಧ್ಯತೆ

0
26
ಮಹದಾಯಿ

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ಪ್ರಕರಣದಲ್ಲಿ ಗೋವಾ ರಾಜ್ಯವು ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ವಿಶೇಷ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿಲ್ಲ. ಮುಂದಿನವಾರ ಈ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆಯಿದೆ ಎಂದು ಮಹದಾಯಿ ಪ್ರಕರಣದ ಗೋವಾ ಪರ ಹಿರಿಯ ವಕೀಲ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕಳಸಾ-ಬಂಡೂರಿ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ ಬಳಿಕ ಮಹದಾಯಿ ವಿಚಾರ ಮತ್ತೆ ಚರ್ಚೆಗೆ ಬಂದಿತ್ತು. ಗೋವಾದಲ್ಲಿ ಪ್ರತಿಪಕ್ಷಗಳು ಮತ್ತು ಪರಿಸರವಾದಿಗಳು ಈ ನಿಟ್ಟಿನಲ್ಲಿ ಗೋವಾ ಸರ್ಕಾರವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದವು. ನಂತರ ಗೋವಾ ಸರ್ಕಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.

Previous articleರಾಮ ಮಂದಿರ ಉದ್ಘಾಟನೆಗೆ ಬರಲ್ಲ ಎನ್ನುವ ಕಾಂಗ್ರೆಸ್ ನಿರ್ಣಯ ತುಷ್ಟೀಕರಣಕ್ಕೆ ಹಿಡಿದ ಕೈಗನ್ನಡಿ
Next articleಅನರ್ಹತೆಗೆ ಸ್ಪೀಕರ್ ಮಾನದಂಡ