ಮನೆ ಕುಸಿತ: ಮಹಿಳೆಗೆ ಗಂಭೀರ ಗಾಯ

0
104
ಮನೆ ಕುಸಿತ

ಎಂ.ಕೆ. ಹುಬ್ಬಳ್ಳಿ: ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಇಲ್ಲಿನ ಕತ್ತಿಯವರ ಓಣಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ. ಅಡುಗೆ ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದ ವೇಳೆ ಏಕಾಏಕಿ ಗೋಡೆ ಮತ್ತು ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಕಾಳಮ್ಮ ಮಹಾರುದ್ರಪ್ಪ ಕಂಬಾರ(30) ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಣ್ಣಿನಡಿ ಸಿಲುಕಿದ್ದ ಮಹಿಳೆ ರಕ್ಷಣೆಗಾಗಿ ಕಿರುಚಲಾರಂಭಿಸಿದ್ದನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕಾಗಮಿಸಿ ಹರಸಾಹಸದಿಂದ ಮಣ್ಣಿನಲ್ಲಿ ಹೂತುಕೊಂಡಿದ್ದ ಮಹಿಳೆಯನ್ನು ಹೊರತೆಗಿದ್ದಾರೆ. 108 ತುರ್ತು ಆಂಬ್ಯುಲೆನ್ಸ್ ಮೂಲಕ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

Previous articleಮೊಸಳೆ ಪ್ರತ್ಯಕ್ಷ: ರೈತರಲ್ಲಿ ಆತಂಕ
Next articleಸಿಬಿಐ ಅಧಿಕಾರಿಗಳಿಂದ ಕಿರುಕುಳ: ರೆಡ್ಡಿ ಆರೋಪ