ಮಧೂರು ಕ್ಷೇತ್ರ ಜಲಾವೃತ

0
31

ಸಂ. ಕ. ಸಮಾಚಾರ, ಮಂಗಳೂರು: ಕಾಸರಗೋಡು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ಪರಿಣಾಮ, ಮಧುವಾಹಿನಿ ಸಹಿತ ಕಾಸರಗೋಡು ಜಿಲ್ಲೆಯ ಹಲವು ನದಿಗಳು ತುಂಬಿ ಹರಿಯುತ್ತಿದೆ. ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ.
ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿರುವುದರಿಂದ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಪ್ರಾಂಗಣದೊಳಗೆ ಮಳೆ ನೀರು ತುಂಬಿಕೊಂಡಿದೆ. ಸುಮಾರು ೧ ಆಡಿಗೂ ಹೆಚ್ಚು ನೀರು ತುಂಬಿಕೊಂಡಿದೆ ಎಂದು ಹೇಳಲಾಗಿದೆ.
ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಕೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡು ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇತ್ತೀಚಿಗೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಜೃಂಭಣೆಯಾಗಿ ಬ್ರಹ್ಮಕಲಶ ನೆರವೇರಿತ್ತು.

Previous articleದಕ್ಷಿಣ ಕನ್ನಡ ‘ಮುಸಲಧಾರೆ’ ಮಳೆ: ಐವರ ಸಾವು, ಇಬ್ಬರು ನೀರು ಪಾಲು, ಜನಜೀವನ ಅಸ್ತವ್ಯಸ್ತ
Next articleತಾಯಿಯ ತಬ್ಬಿ ಹಿಡಿದರೂ ಉಳಿಯಲ್ಲಿಲ್ಲ ಮಕ್ಕಳ ಪ್ರಾಣ: ದುರಂತಕ್ಕೆ ಸಾಕ್ಷಿಯಾದ ಉಳ್ಳಾಲ