ಮದುವೆಯಲ್ಲಿ ರಸಮಲೈ ತಿಂದ ೭೦ ಅತಿಥಿಗಳು ಅಸ್ವಸ್ಥ

0
16

ಅಂಬೇಡ್ಕರ್ ನಗರ: ಉತ್ತರಪ್ರದೇಶದ ಅಂಬೇಡ್ಕರ್‌ನಗರದಲ್ಲಿ ಜರುಗಿದ ವಿವಾಹ ಸಮಾರಂಭದಲ್ಲಿ ರಸಾಯಿಮಲೈ-ಚೌಮೆನ್ ತಿಂದ ೭೦ಕ್ಕೂ ಹೆಚ್ಚು ಅತಿಥಿಗಳು ವಾಂತಿ ಬೇಧಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥರಾದವರಲ್ಲಿ ವಧು-ವರ ಎರಡೂಕಡೆಯವರಿದ್ದಾರೆ. ಮದುವೆ ಆಹಾರ ಕಲುಷಿತ ಅಥವಾ ವಿಷಪೂರಿತವಾಗಿದ್ದಿರಬಹುದು ಹೇಳಲಾಗುತ್ತಿದೆ. ಬೆಳಗಿನ ಉಪಹಾರ ಹಾಗೂ ರಾತ್ರಿ ಊಟದ ನಂತರ ಮದುವೆಯಲ್ಲಿ ಪಾಲ್ಗೊಂಡ ಅತಿಥಿಗಳಲ್ಲಿ ಒಬ್ಬೊಬ್ಬರಾಗಿ ವಾಂತಿ ಬೇಧಿ ಮಾಡಿಕೊಂಡರು. ಈ ರೀತಿಯಾಗಿ ಅಸ್ವಸ್ಥರಾದವರ ಸಂಖ್ಯೆ ಏರುತ್ತಾ ಹೋದಂತೆ ಮದುವೆ ಸಮಾರಂಭದಲ್ಲಿ ಗೊಂದಲ ಉಂಟಾಯಿತು. ಅನಾರೋಗ್ಯಪೀಡಿತರನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು.

Previous articleಹತ್ತು ವರ್ಷದಲ್ಲಿ ೧೫ ವರ್ಷ ಬೆಳೆದ ಅಭ್ಯರ್ಥಿ!
Next article೩೦ ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ