ಮಥುರಾ: ಪೂಜೆಗೆ ಮುಸ್ಲಿಮರ ವಿರೋಧ

0
31

ಪ್ರಯಾಗ್‌ರಾಜ್: ಮಥುರಾದಲ್ಲಿನ ಶಾಹಿ ಈದ್ಗಾ ಆವರಣದಲ್ಲಿರುವ ಕೃಷ್ಣ ಕೂಪ(ಬಾವಿ)ದಲ್ಲಿ ಬಾಸೋಡ ಪೂಜೆ ಮಾಡುವ ಹಿಂದೂ ಭಕ್ತರ ಮನವಿಗೆ ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಮಾತಾ ಶೀತಲ ಸಪ್ತಮಿ ಹಾಗೂ ಮಾತಾ ಶೀತಲ ಅಷ್ಟಮಿ ದಿನ ಈ ಬಾವಿಯಲ್ಲಿ ಬಾಸೋಡ ಪೂಜೆ ಮಾಡಲಾಗುತ್ತಿದೆ. ಹಾಲಿ ವರ್ಷದಲ್ಲಿ ಏಪ್ರಿಲ್ ೧ ಮತ್ತು ೨ರಂದು ಪೂಜೆ ನಡೆಸಲು ಅವಕಾಶ ನೀಡಬೇಕೆಂದು ಹಿಂದೂ ಭಕ್ತರ ಪರ ಅಶುತೋಷ್ ಪಾಂಡೆ ಅಲಹಾಬಾದ್ ಹೈಕೋರ್ಟ್‌ಗೆ ಬುಧವಾರ ಮನವಿ ಸಲ್ಲಿಸಿದ್ದಾರೆ. ಶಾಹಿ ಈದ್ಗಾ ಆವರಣದಲ್ಲಿ ಪೂಜೆ ಮಾಡುವುದಕ್ಕೆ ಮುಸ್ಲಿಮ್ ಪರ ವಕೀಲರು ವಿರೋಧ ವ್ಯಕ್ತಪಡಿಸಿದರು.

Previous articleಗೋವಾದಿಂದ ಬೆಂಗಳೂರಿಗೆ ಬಸ್‌ಗಿಂತ ವಿಮಾನ ದರ ಅಗ್ಗ
Next articleಪೆಟ್ರೋಲ್ ೭೫ ರೂ. ಎಲ್‌ಪಿಜಿ ೫೦೦ ರೂ. : ಡಿಎಂಕೆ ಪ್ರಣಾಳಿಕೆ