Home Advertisement
Home ತಾಜಾ ಸುದ್ದಿ ಮತಾಂತರವಾದರೆ ನಿನ್ನೊಂದಿಗೆ ಸಂಸಾರ

ಮತಾಂತರವಾದರೆ ನಿನ್ನೊಂದಿಗೆ ಸಂಸಾರ

0
88
ಮತಾಂತರ

ಹುಬ್ಬಳ್ಳಿ: ನೀನು ಮತಾಂತರವಾದರೆ ನಿನ್ನೊಂದಿಗೆ ಸಂಸಾರ… ಇಲ್ಲದೇ ಇದ್ದರೆ ಸಂಸಾರ ಮಾಡಲ್ಲ! ಇದು ಯಾವುದೋ ನಾಟಕ ಡೈಲಾಗ್, ಪತಿ ಪತ್ನಿಯ ನಡುವೆ ಸಣ್ಣಪುಟ್ಟ ಜಗಳದಲ್ಲಿ ಆಡಿದ ಮಾತುಗಳಲ್ಲ. ಬದಲಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆ ಆಕೆಯ ಪತಿಗೆ ನೀಡಿದ ಎಚ್ಚರಿಕೆ. ಈಕೆ ಎಚ್ಚರಿಕೆ ನೀಡಿದ್ದು ಒಮ್ಮೆಯಲ್ಲ. ಎರಡು ಬಾರಿಯಲ್ಲ. ಹತ್ತಾರು ಬಾರಿ ಎಚ್ಚರಿಕೆ ನೀಡಿದ್ದಾಳೆ.
ಈಕೆಯ ಕಿರಿಕಿರಿಗೆ ರೋಸಿಹೋದ ಪತಿರಾಯ ತನ್ನ ಸಮುದಾಯದ ಹಿರಿಯರ ಗಮನಕ್ಕೆ ತಂದಾಗ ಅವರು ಆತನ ಪತ್ನಿಯನ್ನು ವಿಚಾರಿಸಿ ಬಳಿಕ ತಿಳಿವಳಿಕೆ ಮಾತಿಗೆ ಜಗ್ಗದೇ ಇದ್ದಾಗ ಇಡೀ ಸಮುದಾಯ, ಬಡಾವಣೆ ಜನರೆಲ್ಲ ಸೇರಿ ಮತಾಂತರ ಪ್ರಯತ್ನದ ವಿರುದ್ಧ ಸಿಡಿದೆದ್ದಿದ್ದಾರೆ. ಅಷ್ಟೇ ಅಲ್ಲ ಇಂತಹ ಕೃತ್ಯಕ್ಕಿಳಿದ ಜಾಲವನ್ನು ಬೇಧಿಸಿ ಮೂಗುದಾರ ಹಾಕಬೇಕು ಎಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ೧೫ ಜನರ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಿಗೂ ಮುನ್ನ ಗಂಟೆ ಗಟ್ಟಲೆ ಠಾಣೆ ಮುಂದೆ ಜಮಾಯಿಸಿದ ಜನರು ಮತಾಂತರ ಕೃತ್ಯದ ವಿರುದ್ಧ ಆಕ್ರೋಶದ ನುಡಿಗಳನ್ನಾಡಿದರು. ಇಂಥವರನ್ನು ಗಡಿಪಾರು ಮಾಡಿ ಎಂದು ಪಟ್ಟು ಹಿಡಿದರು.

Previous articleಅಡಿಕೆ ಎಲೆಗೆ ಚುಕ್ಕಿರೋಗ: ಔಷಧಕ್ಕಾಗಿ ೧೦ ಕೋ. ರೂ. ಬಿಡುಗಡೆ
Next articleಮಾಜಿ ಸಚಿವ ಕೆಎನ್ ಗಡ್ಡಿಗೆ ಮಾತೃವಿಯೋಗ