ಬಳ್ಳಾರಿ: ತಾಲ್ಲೂಕಿನ ಸಂಗನಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆ 2ರಲ್ಲಿ ಮತಯಂತ್ರ ದೋಷದ ಕಾರಣಕ್ಕೆ ಕೆಲ ಕಾಲ ಮತದಾನಕ್ಕೆ ವ್ಯತ್ಯಯ ಉಂಟಾಯಿತು.
ಮತ ಯಂತ್ರ ಸ್ಟಾರ್ಟ್ ಮಾಡುತ್ತಲೇ ಹಳೆಯ ಯಂತ್ರ ಅಂಕಿ ಅಂಶ ತೋರಿಸುತ್ತಿತ್ತು. 45 ಮತಗಳಿಂದ ಅಭ್ಯರ್ಥಿ ಜಯ ಗಳಿಸಿದ್ದಾರೆ ಎಂದು ತೋರಿಸುತ್ತಿತ್ತು.
ಕೊನೆಗೆ ಅಧಿಕಾರಿಗಳು ಹಳೆಯ ಅಂಕಿ ಅಂಶಗಳನ್ನು ಅಳಿಸಿ, ಹೊಸದಾಗಿ ಮತ ಯಂತ್ರವನ್ನು ಪುನಃ ಸ್ಟಾರ್ಟ್ ಮಾಡಿ ಮತದಾನ ಆರಂಭಿಸಿದರು.


























