ಮತ ಚಲಾಯಿಸಿದ ಪದ್ಮಶ್ರೀ ಮಂಜಮ್ಮ ಜೋಗತಿ

0
34

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ರಾಯಭಾರಿ ಪದ್ಮಶ್ರೀ ಪುರಸ್ಕೃತ ಮಂಜಮ್ಮ ಜೋಗತಿ ಅವರು ಮತದಾನ ಮಾಡಿದರು. ನಂತರ ಸಾಮಾಜಿಕ ಜಾಲತಾಣದಲ್ಲಿ ಮಂಜಮ್ಮ ಜೋಗತಿ ಅವರು ಎಲ್ಲರೂ ಮತದಾನ ಮಾಡುವಂತೆ ವಿನಂತಿ ಮಾಡಿದ್ದಾರೆ. ತೀಯಲಿಂಗದ ಸಮುದಾಯದವರಿಗೆ ನನ್ನ ವಿಶೇಷ ವಿನಂತಿ… ಬನ್ನಿ ಯಾವುದೇ ಮುಜುಗರವಿಲ್ಲದೆ ನಮ್ಮ ಹಕ್ಕನ್ನು ಚಲಾಯಿಸೋಣ….
ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ… ಎಂದು ಟ್ವೀಟ್‌ ಮಾಡಿದ್ದಾರೆ.

Previous articleಅಮೆರಿಕಾದಿಂದ ಬಂದರೂ ಮತದಾನದಿಂದ ವಂಚಿತನಾದ ಮತದಾರ!
Next articleವಿಜಯಪುರ ಜಿಲ್ಲೆ: ಮಧ್ಯಾಹ್ನ1 ಗಂಟೆವರೆಗೆ ಶೇ.35.98ರಷ್ಟು ಮತದಾನ