ಉಳ್ಳಾಲ: ವಿಪರೀತ ಮಳೆ ಹಿನ್ನೆಲೆ ಗುಡ್ಡ ಜರಿದು ಬಿದ್ದು ಇಬ್ಬರ ಜೀವ ಹಾನಿಯಾದ ಘಟನೆ ನಡೆದ ಕಾಂತಪ್ಪ ಅವರ ಮನೆ ಬಳಿ ಮಣ್ಣಿನ ಡಿ ಉಳಿದಿರುವ ಮೂವರ ಪೈಕಿ ಒಂದು ಮಗುವಿನ ಮೃತ ದೇಹ ಸಿಕ್ಕಿದ್ದು , ಮೃತ ದೇಹವನ್ನು ಹೊರ ತೆಗೆಯಲಾಗಿದೆ.ಮತ್ತೆ ಇಬ್ಬರ ಜೀವ ಉಳಿಕೆ ಗೆ ಸ್ಥಳೀಯರು, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ತಂಡದ ಕಾರ್ಯಾಚರಣೆ ಮುಂದುವರಿದಿದೆ. ಇಬ್ಬರು ಮನೆಯ ಮೇಲ್ಛಾವಣಿ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಉಳಿಕೆಗೆ ಜನರು ಪ್ರಯತ್ನ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ವೈದ್ಯಕೀಯ ಉಪಕರಣ, ವೈದ್ಯರ , ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೀತಾರಾಮ ಅವರ ಪತ್ನಿ ಹಾಗೂ ಪುತ್ರ ಜತೆಯಾಗಿ ಒಂದು ಕೊಠಡಿಯಲ್ಲಿ ಮಲಗಿದ್ದರು.
ಕಲ್ಲಾಪು ಪಟ್ಲ ಎಂಬಲ್ಲಿ ಮನೆಗಳು ಜಲಾವೃತ ಆಗಿದ್ದು, 25 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅಜ್ಜಿನಡ್ಕ ಸಮೀಪದ ಕೊಮರಂಗಲ ಬಳಿ 25 ಆಡುಗಳು ಮಳೆನೀರಿನಲ್ಲಿ ಮುಳುಗಿ ಸಾವಿಗಾಡಿದೆ. ಉಳ್ಳಾಲ ಬೈಲ್ ನಲ್ಲಿ ನೂರು ಮನೆಗಳು ಜಲಾವೃತ ಗೊಂಡಿದ್ದು, ಸ್ಥಳಾಂತರ ಕಾರ್ಯ ಮುಂದುವರಿದಿದೆ.