ಮಕ್ಕಳ ಕಳ್ಳರೆಂದು ಶಂಕೆ ಸ್ಥಳೀಯರಿಂದ ಹಲ್ಲೆ

0
31
ಮಕ್ಕಳ ಕಳ್ಳರು

ವಿಜಯಪುರ: ಸಾರ್ವಜನಿಕರು ಮಕ್ಕಳ ಕಳ್ಳರೆಂದು ನಾಲ್ವರನ್ನು ಹಿಡಿದು ತಳಿಸಿರುವ ಘಟನೆ ವಿಜಯಪುರ ನಗರದ ಗ್ಯಾಂಗ್ ಬಾವಡಿ ಬಡಾವಣೆಯಲ್ಲಿ ನಡೆದಿದೆ. ಅನುಮಾನಾಸ್ಪದವಾಗಿ ಬಡಾವಣೆಯಲ್ಲಿ ಓಡಾಡುತ್ತಿದ್ದ ಇಬ್ಬರು ಮಹಿಳೆಯರು, ಇಬ್ಬರು ಪುರುಷರನ್ನು ಹಿಡಿದು ಸ್ಥಳೀಯ ನಿವಾಸಿಗಳು ಹಲ್ಲೆ ಮಾಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಗಾಂಧಿ ಚೌಕ ಪೊಲೀಸರು ಹಲ್ಲೆಗೊಳಗಾದವರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ನಂತರ ಗಾಂಧಿ ಚೌಕ್ ಸಿಪಿಐ ರಾಯಗೊಂಡ ಜನಾರ ನೇತೃತ್ವದಲ್ಲಿ ವಿಚಾರಣೆ ನಡೆಸಿದ ಪೊಲೀಸರಿಗೆ ಹಲ್ಲೆಗೊಳಗಾದವರ ದಾಖಲೆ ಪರಿಶೀಲನೆ ವೇಳೆ ನಾಲ್ವರು ದೆಹಲಿ ಮೂಲದವರು ಎಂದು ತಿಳಿದು ಬಂದಿದೆ.
ಶಾಂತಾದಾಸ್ ಹಾಗೂ ಜಿಹಾನ್ ಎಂಬ ಇಬ್ಬರು ಮಹಿಳೆಯರು ಮತ್ತು ಶಾಹಿದ್ ಹಾಗೂ ಹಕೀಮ್ ಎಂಬ ಇಬ್ಬರು ಪುರುಷರ ಮಾಹಿತಿ ಲಭ್ಯವಾಗಿದ್ದು ಈ ಕುರಿತು ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬೆಳಗಾವಿ ಎಸ್ಪಿ ಹೆಸರಿನಲ್ಲಿ ನಕಲಿ ಖಾತೆ
Next articleರಮೇಶ ಜಾರಕಿಹೊಳಿಗೆ ಸರಕಾರ ಬೀಳಿಸುವ ಶಕ್ತಿ ಇದೆ: ಸತೀಶ್‌