ಮಂತ್ರಾಲಯದ ಶ್ರೀರಾಯರ ಹುಂಡಿಯಲ್ಲಿ 4.05 ಕೋಟಿ ಹಣ ಸಂಗ್ರಹ

0
48


ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಕಾಣಿಕೆ ಹುಂಡಿಯಲ್ಲಿ ಕಳೆದ 32
ದಿನಗಳ ಕಾಲಾವಧಿಯ ಕಾಣಿಕೆ ಹಣ ಏಣಿಕೆ ಮಂಗಳವಾರದಿಂದ ಆರಂಭಗೊಂಡು ಬುಧವಾರ ಪೂರ್ಣಗೊಂಡಿದ್ದು,
ಭಕ್ತರು ಕಾಣಿಕೆ ರೂಪದಲ್ಲಿ ಹಾಕಿರುವ ಒಟ್ಟು 4.05 ಕೋಟಿಗಳಷ್ಟು ಹಣ ಸಂಗ್ರಹಣೆಯಾಗಿದೆ.
3,93,72,935 ರೂಗಳ ಮೌಲ್ಯದ ನೋಟುಗಳು, 12,22,400 ಮೌಲ್ಯದ ನಾಣ್ಯಗಳು ಸೇರಿ ಒಟ್ಟು
4,05,95,359ರೂಗಳ ಸಂಗ್ರಹಣೆಯಾಗಿದೆ. ಅಲ್ಲದೇ 116ಗ್ರಾಂ ಚಿನ್ನ, 1,495 ಗ್ರಾಂ
ಬೆಳ್ಳಿ ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಗೆ ಹಾಕಿದ್ದಾರೆ ಎಂದು ಮಂತ್ರಾಲಯದ
ಶ್ರೀಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ
Next articleಆರ್ಟಿಕಲ್ 370 ತೆಗೆದಿದ್ದೇ ಹತ್ಯೆಗೆ ಕಾರಣ