ಮಂಗಳೂರು: ತಲಾಖ್ ಪ್ರಕರಣ ಬೆಳಕಿಗೆ

0
27

ಮಂಗಳೂರು: ತ್ರಿವಳಿ ತಲಾಖ್ ನಿಷೇಧಗೊಂಡಿದ್ದರೂ ಮಂಗಳೂರಿನಲ್ಲಿ ಮತ್ತೆ ಬೆಳಕಿಗೆ ಬಂದಿದೆ. ನಗರದ ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್ ಎಂಬಾತನು ಮದುವೆಯಾಗಿ ಆರು ತಿಂಗಳು ಆದಗಲೇ ಆತನ ಪತ್ನಿಯ ಮೇಲೆ ಹಲ್ಲೆ ನಡೆಸಿ ತಲಾಖ್ ನೀಡಿ ಆಕೆಯನ್ನು ಮನೆಯಿಂದ ಹೊರದಬ್ಬಿದ್ದಾನೆ.
ಹಣ್ಣು ತರಕಾರಿ ವ್ಯಾಪಾರಿಯಾಗಿದ್ದ ಮಹಮ್ಮದ್ ಹುಸೇನ್ ಆರು ತಿಂಗಳ ಹಿಂದೆ ಶಬನಾ ಎಂಬಾಕೆಯನ್ನು ಮದುವೆಯಾಗಿ ಆಕೆಯ ಮೇಲೆ ಹಲ್ಲೆ ನಡೆಸಿ ತಲಾಖ್ ಕೊಟ್ಟು ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ.
ಹುಸೇನ್ ಶಬಾನಾರನ್ನು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿಗೆ ೨ ಮಕ್ಕಳು ಇದ್ದು, ಆಕೆಯಿಂದ ಹಣ ಪಟಾಯಿಸಿ ತಲಾಕ್ ನೀಡಿದ್ದನು. ಬಳಿಕ ಶಬಾನಾ ಅವರನ್ನು ಮದುವೆಯಾಗಿ ೮ ದಿನದಲ್ಲಿ ಹಣ ಒಡವೆ ಸೇರಿ ೧೦ ಲಕ್ಷ ರೂ. ಹಣ ಪಟಾಯಿಸಿದ್ದಾನೆ.
ಮತ್ತೆ ಹಣಕ್ಕಾಗಿ ಪೀಡಿಸಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆನಡೆಸಿ ಮೂರು ಬಾರಿ ತಲಾಖ್ ಹೇಳಿ ಮನೆಯಿಂದ ಹೊರದಬ್ಬಿದ್ದಾನೆ. ಗಾಯಗೊಂಡಿರುವ ಶಬಾನಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯ ಅನ್ಯಾಯದಿಂದ ಪತ್ನಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Previous articleಯುವಕ ಆತ್ಮಹತ್ಯೆ
Next articleಶಿಕ್ಷಕ ಸಹಿತ ಇಬ್ಬರು ನೀರುಪಾಲು