ಭಾರತಕ್ಕೆ 10 ವಿಕೆಟ್​ ಭರ್ಜರಿ ಜಯ

0
8

ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ 10 ವಿಕೆಟ್ ಸುಲಭ ಜಯ ದಾಖಲಿಸಿದೆ.
ಟಾಸ್​ ಗೆದ್ದ ಭಾರತ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್​​ ಮಾಡಿದ ನೇಪಾಳ ತಂಡ 48.2 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್​ ಆಯಿತು. ಭಾರತ ತಂಡ ಗುರಿ ಬೆನ್ನಟ್ಟಲು ಆರಂಭಿಸುತ್ತಿದ್ದಂತೆ ಮಳೆ ಆರಂಭವಾಯಿತು. ಬಳಿಕ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ 23 ಓವರ್​ಗಳಲ್ಲಿ 145 ರನ್​ ಬಾರಿಸುವ ಸವಾಲು ಎದುರಾಯಿತು. ಬಾಂಗ್ಲಾದೇಶದ ಬೌಲರ್​ಗಳನ್ನು ಪುಡಿಗಟ್ಟಿದ ರೋಹಿತ್ ಹಾಗೂ ಶುಭ್​ಮನ್ 20.1 ಓವರ್​ಗಳಲ್ಲಿ 147 ರನ್​ ಬಾರಿಸಿ ಗೆಲುವು ತಂದುಕೊಟ್ಟರು. ಈ ಗೆಲುವಿನೊಂದಿಗೆ ಗುಂಪು 1ರಲ್ಲಿರುವ ಭಾರತ ತಂಡ ಎರಡನೇ ತಂಡವಾಗಿ ಸೂಪರ್​-4 ಹಂತಕ್ಕೆ ಪ್ರವೇಶ ಪಡೆಯಿತು.

Previous articleಧಾರಾಕಾರ ಮಳೆ: ದವಸ-ಧಾನ್ಯ ಹಾನಿ
Next articleರಾಮನಗರದಲ್ಲಿ ಸಿಎಂ ಪಾದಯಾತ್ರೆ