ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ದುಬಾರಿ

0
20

ಮುಂಬೈ: ಇದೇ ಅಕ್ಟೋಬರ್ ೫ರಿಂದ ಭಾರತದ ಸಂಪೂರ್ಣ ಆತಿಥ್ಯದಲ್ಲಿ ಐಸಿಸಿ ವಿಶ್ವಕಪ್ ನಡೆಯಲಿದ್ದು, ತೀವ್ರ ಕುತೂಹಲ ಕೆರಳಿಸಿರುವ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಕೆಲ ಅಭಿಮಾನಿಗಳಂತೂ ಮೂರು ತಿಂಗಳಿಗೆ ಮುಂಚೆಯೇ ಇಂಡೋ-ಪಾಕ್ ಕದನ ವೀಕ್ಷಿಸಲೆಂದೇ ಅಹಮದಾಬಾದ್‌ನಲ್ಲಿ ಹೋಟೆಲ್ ರೂಂಗಳನ್ನ ಕಾಯ್ದಿರಿಸಿದ್ದಾರೆ.
ಈ ಪಂದ್ಯಕ್ಕಾಗಿ ಅತ್ಯಂತ ದುಬಾರಿ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ಅಭಿಮಾನಿಗಳು ಹಿಂದೆಂದಿಗಿಂತಲೂ ಅತ್ಯಧಿಕ ಬೆಲೆಗೆ ಟಿಕೆಟ್‌ಗಳನ್ನು ಖರೀದಿಸುವಲ್ಲಿ ನಿರತರಾಗಿದ್ದಾರೆ. ವಿವಿಧ ಹಂತಗಳಲ್ಲಿ ೬೦ ಸಾವಿರದಿಂದ ೧ ಲಕ್ಷ ರೂ, ೧೮ ರಿಂದ ೨೨ ಲಕ್ಷ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಆನ್‌ಲೈನ್ ಸ್ಫೋರ್ಟ್ಸ್ ಟಿಕೆಟ್ ಪ್ಲಾಟ್‌ಫಾರ್ಮ್ ವಿಯಾಗೊದಲ್ಲಿ ೫೬ ಲಕ್ಷ ರೂ.ವರೆಗೆ ಟಿಕೆಟ್ ಮಾರಾಟವಾಗಿದ್ದು, ಅಭಿಮಾನಿಗಳನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೆಲವರು ಹಣ ಕೊಟ್ಟರೂ ಟಿಕೆಟ್ ಸಿಗದೇ ನಿರಾಸೆ ಅನುಭವಿಸುತ್ತಿದ್ದಾರೆ.

Previous articleಐಸಿಸಿ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ಪ್ರಕಟ
Next articleಡಿಸೆಂಬರ್‌ನಲ್ಲಿ ಟೆಕ್ವಾಂಡೋ ಲೀಗ್ ಆರಂಭ