ಭವ್ಯ ಭಾರತ ನಿರ್ಮಾಣಕ್ಕೆ ಕಂಕಣ ಬದ್ಧರಾಗಿ: ಮಾಜಿ‌ ಸಿಎಂ ಜಗದೀಶ ಶೆಟ್ಟರ್

0
12

ಹುಬ್ಬಳ್ಳಿ: ಕೆಎಲ್‌ಇ ಸಂಸ್ಥೆಯ ಬಿ.ವಿ. ಭೂಮರೆಡ್ಡಿ ಕಾಲೇಜಿನ 75 ನೇ ವರ್ಷಾಚರಣೆ ಅಂಗವಾಗಿ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ನಮ್ಮ ನಡೆ ಭವ್ಯ ಭಾರತದ ಕಡೆ ಎಂಬ ಧ್ಯೇಯ ವ್ಯಾಕ್ಯದಡಿ ಬೃಹತ್ ಹುಬ್ಬಳ್ಳಿ ಮ್ಯಾರಥಾನ್ ರವಿವಾರ ಬೆಳಗ್ಗೆ ನಡೆಯಿತು.
ಬಿವಿಬಿ ಕಾಲೇಜು ಆವರಣದಿಂದ ‘ಹುಬ್ಬಳ್ಳಿ ಮ್ಯಾರಾಥಾನ್-2023’ ಗೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಕೆಎಲ್ ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ನಿವೃತ್ತ ಏರ್ ಕಮಾಂಡ್ ಕೆ.ಎಸ್.ಹವಾಲ್ದಾರ, ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ‌ ಶೆಟ್ಟರ್ ಅವರು ಚಾಲನೆ ನೀಡಿದರು.
ಹುಬ್ಬಳ್ಳಿ ಮ್ಯಾರಥಾನ್ ನಲ್ಲಿ ಭಾಗವಹಿಸಿದವರಿಗೆ ಪ್ರಮಾಣ ವಚನ ಬೋದಿಸಲಾಯಿತು. ಮಕ್ಕಳು, ಯುವಕ ಯುವತಿಯರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ನಡೆ ಭವ್ಯ ಭಾರತದ ಕಡೆ ಮ್ಯಾರಥಾನ್ ನಲ್ಲಿ ಹೆಜ್ಜೆ ಹಾಕಿದರು.
ಕಿಮ್ಸ್‌, ಹೊಸೂರು ವೃತ್ತ, ಕಾಟನ್ ಮಾರ್ಕೆಟ್ ಶಾರದಾ ಹೊಟೆಲ್, ವಿವೇಕಾನಂದ ಆಸ್ಪತ್ರೆ, ದೇಸಾಯಿ ಸರ್ಕಲ್, ಕೇಶ್ವಾಪುರ ರಸ್ತೆ, ರೈಲ್ವೆ ಸ್ಟೇಶನ್, ಲ್ಯಾಮಿಂಗ್ಟನ್ ರೋಡ್, ಕಿತ್ತೂರ ರಾಣಿ ಚನ್ನಮ್ಮ ವೃತ್ತ, ಹೊಸೂರು ವೃತ್ತ, ಗೋಕುಲ ವೃತ್ತ, ತೋಳನಕೆರೆ, ಶಿರೂರ ಪಾರ್ಕ್ ಮಾರ್ಗವಾಗಿ ಸಾಗಿ ಬಿವಿಬಿ ಕಾಲೇಜು ತಲುಪಲಿದೆ.
ಒಟ್ಟು 14 ಕಿ.ಮೀ ಮ್ಯಾರಾಥಾನ್ ಇದಾಗಿದ್ದು, 14 ವರ್ಷದೊಳಗಿನವರು, 15ರಿಂದ 49 ವರ್ಷದೊಳಗಿನವರು, 50 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರು ಹೀಗೆ ನಾಲ್ಕು ವಿಭಾಗಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

Previous articleಸಂಸದ ಸಾಂಸ್ಕೃತಿಕ ಮಹೋತ್ಸವ ಗಾಳಿಪಟ ಉತ್ಸವದಲ್ಲಿಂದೇನು?
Next articleದಾಖಲೆಗಳಿಲ್ಲದ ಒಂದು ಕೋಟಿಗೂ ಹೆಚ್ಚು ಹಣ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ