ಬ್ಯಾಸಗಿಗೆ ಬ್ಯಾಸರ ಮಾಡ್ಕ್ಯಬ್ಯಾಡ್ರೀ ಎಂದ ಸತೀಶ ನೀನಾಸಂ

0
24

ಬೆಂಗಳೂರು: ನಟ ಸತೀಶ್ ನೀನಾಸಂ ಅವರ ಸತೀಶ್ ಪಿಕ್ಚರ್ ಹೌಸ್ ಅರ್ಪಿಸುತ್ತಿರುವ ‘ಹೆಬ್ಬುಲಿ ಕಟ್’ ಸಿನಿಮಾ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಸತೀಶ ನಿನಾಶಂ ದೃಶ್ಯ ಹಂಚಿಕೊಂಡು ಬ್ಯಾಸಗಿ ಐತಿ ಅಂತ ಬ್ಯಾಸರ ಮಾಡ್ಕ್ಯಬ್ಯಾಡ್ರೀ ತಣ್ಣನ್ ಸಿನ್ಮಾ ತಂದೀವಿ ಟಾಕೀಸ್ ಗೆ ಬರ್ರೀ ಮೇ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದಿದ್ದಾರೆ.

ಮೌನೇಶ್ ನಟರಂಗ, ಅನನ್ಯ ನಿಹಾರಿಕ, ಮಹಾದೇವ ಹಡಪದ, ಉಮಾ ವೈ.ಜಿ., ವಿನಯ್ ಮಹಾದೇವನ್, ಮಹಾಂತೇಶ್ ಹಿರೇಮಠ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ‘ಡೇರ್‌ಡೆವಿಲ್ ಮುಸ್ತಾಫಾ’ ಚಿತ್ರದ ಚಿತ್ರಕಥೆ, ಸಂಭಾಷಣೆ ಬರೆದಿದ್ದ ಅನಂತ ಶಾಂದ್ರೇಯ ಈ ಸಿನಿಮಾಗೂ ಚಿತ್ರಕಥೆ ಬರೆದಿದ್ದಾರೆ. ದೀಪಕ್ ಯರಗೇರಾ ಛಾಯಾಚಿತ್ರಗ್ರಹಣ, ನವನೀತ್ ಶ್ಯಾಮ ‘ಹೆಬ್ಬುಲಿ ಕಟ್’ಗೆ ಸಂಗೀತ ಚಿತ್ರಕ್ಕಿದ್ದು, ಈ ಚಿತ್ರವನ್ನು ಭೀಮರಾವ್ ನಿರ್ದೇಶಿಸುತ್ತಿದ್ದಾರೆ.

Previous articleನನ್ನ ಪ್ರೀತಿಯ ಹುಡುಗಿಗೆ ೨೪ ವರ್ಷ
Next articleಭ್ರಷ್ಟಾಚಾರ ‌3 ವರ್ಷದಲ್ಲಿ ರಾಜ್ಯದಿಂದ ನಿರ್ಮೂಲ