ಬ್ಯಾಂಕ್ ಮ್ಯಾನೇಜರ್, ಪತ್ನಿ, ಇಬ್ಬರು ಮಕ್ಕಳ ಮೃತದೇಹ ಪತ್ತೆ

0
19

ಕಾಸರಗೋಡು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಶಾಖೆಯ ಪ್ರಬಂಧಕಿ, ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ಪ್ರಬಂಧಕಿ ಶೀನಾ (೩೫), ಅವರ ಪತಿ ಸಬೀಶ್ (೩೭), ಮಕ್ಕಳಾದ ಹರಿಗೋವಿಂದ್ (೬), ಮತ್ತು ಶ್ರೀವರ್ಧನ್ (೨.೫) ಎಂದು ಗುರುತಿಸಲಾಗಿದೆ.
ಶೀನಾ ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ಮಲಪ್ಪುರಂ ಮುಂಡುಪರಂಬ ಮೈತ್ರಿ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಸಬೀಶ್ ಮನೆಯ ಒಂದು ಕೊಠಡಿಯೊಳಗೆ ಹಾಗೂ ಶೀನಾ ಇನ್ನೊಂದು ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಬೀಶ್ ನೇಣು ಬಿಗಿದ ಕೊಠಡಿಯ ಹಾಸಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಕೆಳಗೆ ನೆಲದಲ್ಲಿ ಪತ್ತೆಯಾಗಿದೆ. ಶೀನಾ ಕೆಲವು ದಿನಗಳ ಹಿಂದೆಯಷ್ಟೇ ಎಸ್‌ಬಿಐಯ ಕಾಸರಗೋಡು ಶಾಖೆಗೆ ವರ್ಗಾವಣೆಗೊಂಡಿದ್ದರು.

Previous articleದೈವಾರಾಧನೆ ನಿಂದನೆ ಬೆಂಗಳೂರಿನ ವ್ಯಕ್ತಿ ಸೆರೆ
Next articleದಕ್ಷಿಣ ಕನ್ನಡ ಮತ್ತೆ ಮಳೆ ಬಿರುಸು