ಬೊಲೆರೊ-ಬೈಕ್ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು

0
11

ಚಿಕ್ಕೋಡಿ: ಬೊಲೆರೋ- ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕೋಡಿ-ಮಿರಜ್ ರಸ್ತೆಯ ಕೆರೂರ ಕ್ರಾಸ್ ಬಳಿ ನಡೆದಿದೆ.
ಲಖಪ್ಪಾ ಮಾಳು ಹೆಗನ್ನವರ (55) ಮೃತ ವ್ಯಕ್ತಿ. ಚಿಕ್ಕೋಡಿ ತಾಲೂಕಿನ ನಾಗರಾಳ ಗ್ರಾಮದ ಬಾಳುಮಾಮಾ ದೇವಸ್ಥಾನದ ಸಂಸ್ಥಾಪಕ ಹಾಗೂ ಪೂಜಾರಿ ಆಗಿದ್ದ ಲಖಪ್ಪಾ ಶನಿವಾರ ಸಂಜೆ ಕೆಲಸದ ನಿಮಿತ್ತ ಬೈಕ್ ಮೇಲೆ ಕೆರೂರಗೆ ಹೋಗಿ ಊರಿಗೆ ಮರಳುವಾಗ ಕೇರೂರ ಕ್ರಾಸ್ ಬಳಿ ಚಿಕ್ಕೋಡಿ ಕಡೆಗೆ ಹೋಗುತ್ತಿದ್ದ ಬೊಲೆರೊ ವಾಹನಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಕೊನೆಯುಸಿಳೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleನರಳುವವರಿಗೆ ನೆರವಾದರೆ ಮಾತ್ರ ಸಾರ್ಥಕತೆ
Next articleವಿದ್ಯುತ್ ನೀಡದಿದ್ದರೆ ಕುಡಿಯುವ ನೀರಿಗೆ ಹಾಹಾಕಾರ