ಬೈಕ್‌ಗೆ ಕಾರ್‌ ಡಿಕ್ಕಿ: ಓರ್ವ ಸಾವು

0
16

ವಿಜಯಪುರ: ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರದ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ನಡೆದಿದೆ.
ಇಂಡಿ ತಾಲೂಕಿನ ಅಗರಖೇಡ ಗ್ರಾಮದ ನಿವಾಸಿ ವಕೀಲ ರವಿ ಮೇಲಿನಕೇರಿ(35) ಮೃತಪಟ್ಟಿರುವ ವ್ಯಕ್ತಿ ಎಂದು ತಿಳಿದು ಬಂದಿದ್ದು, ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಬಳಿಕ ಅರ್ಧ ಕಿಮೀ ವರೆಗೆ ವ್ಯಕ್ತಿಯನ್ನು ಎಳೆದುಕೊಂಡು ಹೋಗಿದೆ ಎನ್ನಲಾಗಿದೆ. ಕಾರು ಚಾಲಕ ವಾಹನ ಸಮೇತ ಪರಾರಿಯಾಗಿದ್ದು, ವಿಜಯಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Previous articleಕಿತ್ತು ಹೋದ ರಸ್ತೆಯಲ್ಲಿ ಮುಂದುವರೆದ ಸಂಚಾರ!
Next articleಶ್ರೀರಂಗಪಟ್ಟಣ ತಲುಪಿದ ಮಿತ್ರ ಪಕ್ಷಗಳ ಮೈಸೂರು ಚಲೋ ಚಳುವಳಿ