ಬೈಕ್ ಅಪಘಾತ: ಇಬ್ಬರು ಸಾವು

0
33

ಕುಷ್ಟಗಿ: ಕಡೇಕೊಪ್ಪ ಬ್ರಿಜ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಮೃತಪಟ್ಟಿದ್ದು, ಒಬ್ಬ ಗಾಯಗೊಂಡಿದ್ದಾರೆ.
ತಾಲೂಕಿನ ವಣಗೇರಿ ಗ್ರಾಮದ ಹನಮಂತ ಚನ್ನಬಸಪ್ಪ ಗುರಿಕಾರ(೩೦), ಪರಸಪ್ಪ ಶರಣಪ್ಪ ಗುರಿಕಾರ(೩೧) ಮೃತಪಟ್ಟವರು. ಪರಶುರಾಮ ಶಿವಪ್ಪ ಗುರಿಕಾರ(೩೮) ಗಾಯಗೊಂಡ ವ್ಯಕ್ತಿ.
ತಾಲೂಕಿನ ವಣಗೇರಾ ಗ್ರಾಮದಿಂದ ಬೈಕ್‌ನಲ್ಲಿ ಇಳಕಲ್ ಕಡೆಗೆ ಹೋಗುವಾಗ ಘಟನೆ ನಡೆದಿದೆ. ಗಾಯಾಳು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ದೇಹಗಳನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬೀಡಿ-ಸಿಗರೇಟಿಗೆ ಕೈದಿಗಳ ಪ್ರತಿಭಟನೆ
Next articleಬೆಂಗಳೂರಿನ ರೈಲ್ವೆ ತರಬೇತಿ ಕೇಂದ್ರಕ್ಕೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ