ಬೆಳ್ಳಂ ಬೆಳಿಗ್ಗೆ ಉದ್ಯಮಿಯ ಮನೆ, ಕಚೇರಿ ಮೇಲೆ ಐಟಿ ದಾಳಿ

0
30

ಒಟ್ಟು ಐದು ತಂಡಗಳಿಂದ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ

ಬೆಳಗಾವಿ: ನಗರದ ಉದ್ಯಮಿಯ ಮನೆ ಮತ್ತು ಕಚೇರಿ ಮೇಲೆ ಗೋವಾ ಮತ್ತು ರಾಜ್ಯದ ಐಟಿ ಅಧಿಕಾರಿಗಳ ತಂಡ ಬೆಳ್ಳಂ ಬೆಳಿಗ್ಗೆ ದಾಳಿ ಮಾಡಿದೆ.
ಬೆಳಗಾವಿಯ ಉದ್ಯಮಿ ವಿನೋದ ದೊಡ್ಡವರ, ಅಜಿತ್ ಪಟೇಲ್ ಮತ್ತು ಅಶೋಕ ಹುಂಬರವಾಡಿ ಎಂಬವರ ಮನೆಗಳು ಮತ್ತು ಕಚೇರಿಗಳ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಅವರಿಗೆ ಸೇರಿದ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ. ಕ್ಯಾಂಪ್ ಮತ್ತು ಟಿಳಕವಾಡಿ ಠಾಣೆ ವ್ಯಾಪ್ತಿಯ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ.ಇವರು ಮೈನಿಂಗ್ ಮತ್ತು ಸಕ್ಕರೆ ಉದ್ಯಮ ನಡೆಸುತ್ತಿದ್ದರು.

Previous articleಯುವಕನ ಬರ್ಬರ ಹತ್ಯೆ: ಹತ್ಯೆಕೋರರ ಕಾಲಿಗೆ ಗುಂಡೇಟು
Next articleಮಕ್ಕಳ ಅನ್ನಭಾಗ್ಯವನ್ನೇ ಕಿತ್ತುಕೊಂಡ ಶಾಪ…