ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸೂಕ್ತವಲ್ಲ: ಸಿಎಂ ಬೊಮ್ಮಾಯಿ

0
17
ರಾಮದುರ್ಗ

ಬೆಳಗಾವಿ(ರಾಮದುರ್ಗ): ಎರಡು ರಾಜ್ಯಗಳ ಮಧ್ಯೆ ಇರುವ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಅವರು ಇಲ್ಲಿಗೆ ಬರಬಾರದು ಎಂಬ ಸಂದೇಶವನ್ನು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ರಾಮದುರ್ಗದ ಮಾಧ್ಯಮದವರೊಂದಿಗೆ ಮಾತನಾಡಿದರು. ಡಿಸೆಂಬರ್ 06 ರಂದು ಬೆಳಗಾವಿಗೆ ಮಹಾರಾಷ್ಟ್ರದ ಸಚಿವರು ಆಗಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ಹಿಂದೆ ಹಲವಾರು ಬಾರಿ ಈ ಪ್ರಯತ್ನ ಗಳಾದಾಗ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿತ್ತೋ ಅದೇ ಕ್ರಮವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.
ಕುಡಿಯುವ ನೀರಿನ ಯೋಜನೆ ಸಾಕಾರಗೊಳ್ಳಲಿ :
ಕನ್ನಡ ಕುಲಬಾಂಧವರಿರುವ ಜತ್ ತಾಲ್ಲೂಕಿನವರು ಹಲವಾರು ವರ್ಷಗಳಿಂದ ನೀರಿಲ್ಲದೆ ಬಳಲುತ್ತಿದ್ದರು. ಅಂತಹುದರಲ್ಲಿ ಮಹಾರಾಷ್ಟ್ರ ನೀರಿನ ಯೋಜನೆ ರೂಪಿಸಿದೆ ಎಂದಿದ್ದಾರೆ. ಆ ಯೋಜನೆ ಸಾಕಾರಗೊಳ್ಳಲಿ. ಆ ಭಾಗದ ಜನರಿಗೆ ನೀರು ತಲುಪುವ ಕೆಲಸವಾಗಲಿ ಎಂದರು.

Previous articleಚುನಾವಣಾಧಿಕಾರಿಗಳು ಪರಿಶೀಲಿಸಿ ಸೂಕ್ತ ಹೆಸರುಗಳನ್ನು ಸೇರಿಸುತ್ತಾರೆ: ಶಾಸಕ ಅರವಿಂದ ಬೆಲ್ಲದ್‌
Next articleಕನ್ನಡಿಗರ ಅಭಿವೃದ್ಧಿ, ರಕ್ಷಣೆಗೆ ಸರಕಾರ ಬದ್ಧ: ಸಿಎಂ