ಬೆಂಗಳೂರು-ಮೈಸೂರು ಜನತೆಗೆ ಕುಡಿವ ನೀರು ಬಂದ್: ರೈತರ ಎಚ್ಚರಿಕೆ

0
16

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಡ್ಯ ಜಿಲ್ಲೆಯ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದರೆ ಕಾವೇರಿ ನೀರು ಕುಡಿಯುತ್ತಿರುವ ಮೈಸೂರು-ಬೆಂಗಳೂರಿನ ಜನತೆ ಹೀಗೆಯೇ ಮೌನವಹಿಸಿದರೆ ಕುಡಿಯುವ ನೀರನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಮೈಸೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ತಾಲ್ಲುಕಿನ‌ ಪಂಪ್ ಹೌಸ್ ಎದುರು ಪ್ರತಿಭಟನೆ ನಡೆಸಿ ಬೆಂಗಳೂರು-ಮೈಸೂರು ಜನತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ರನ್ನು‌ ಮೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ಹಿತವನ್ನು ಬಲಿಕೊಡುತ್ತಿದೆ. ಆ ಮೂಲಕ ಜಿಲ್ಲೆಯ ರೈತರಿಗೆ ವಿಷವುಣಿಸಲು ಹೊರಟಿದ್ದು, ಕಾವೇರಿ ನೀರಿನ‌ ರಕ್ಷಣೆಗಾಗಿ‌ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ.
ಪ್ರತಿನಿತ್ಯ ಕಾವೇರಿ ನೀರನ್ನು ಕುಡಿಯುತ್ತಿರುವ ಮೈಸೂರು-ಬೆಂಗಳೂರಿನ‌ ಜನತೆ ಇದಕ್ಕೂ ನಮಗೂ ಏನೂ ಸಂಬಂಧ ಇಲ್ಲವೆಂಬಂತೆ ಮೌನವಹಿಸಿದ್ದಾರೆ. ಕುಡಿಯುವ ನೀರು ಬಂದ್ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ರೈತರ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.

Previous articleಸ್ಟಾಲಿನ್ ವಿರುದ್ಧ ದಾವೆ
Next articleಸೌಜನ್ಯ ಪ್ರಕರಣ: ಮೇಲ್ಮನವಿ ಸಲ್ಲಿಸಲು ಅವಕಾಶ