ಬೀಟಮ್ಮ ಗ್ಯಾಂಗ್‌ ದಾಂಧಲೆಗೆ ಜನತೆ ತತ್ತರ: ಹತ್ತಾರು ಗ್ರಾಮಗಳಲ್ಲಿ ನಿಷೇಧಾಜ್ಞೆ

0
25

ಚಿಕ್ಕಮಗಳೂರು: ಬೀಟಮ್ಮ ಕಾಡಾನೆ ಗ್ಯಾಂಗ್‌ನ ಹಾವಳಿ ಮುಂದುವರೆದಿದ್ದು ಆಲ್ದೂರು ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭೀತಿ ಹೆಚ್ಚಾಗಿದೆ. 17 ಆನೆಗಳ ತಂಡದಲ್ಲಿ ಒಂದು ಆನೆ ಮೃತಪಟ್ಟಿದ್ದರು ದಾಂಧಲೆ ಮಾತ್ರ ಇನ್ನೂ ಕಡಿಮೆ ಆಗಿಲ್ಲ ಈ ನಡುವೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಬೀಟಮ್ಮ ಗ್ಯಾಂಗ್ ಓಡಾಡುತ್ತಿರುವ ಹತ್ತಾರು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
4 ದಿನಗಳಿಂದ ಚಿಕ್ಕಮಗಳೂರಿನ ಕೆಲ ಗ್ರಾಮಗಳಲ್ಲಿ ಕಾಡಾನೆ ಹಿಂಡು ಬೀಟಮ್ಮ ಗ್ಯಾಂಗ್ ಹಾವಳಿ ಗಮನದಲ್ಲಿರಿಸಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಆಲ್ದೂರು ಸುತ್ತಮುತ್ತಲಿನ 10 ಹಳ್ಳಿಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. 4 ದಿನಗಳಿಂದ ಆಲ್ದೂರು ಸುತ್ತಮುತ್ತ ಬೀಡು ಬಿಟ್ಟಿರುವ ಬೀಟಮ್ಮ ಗ್ಯಾಂಗ್ ಭೀತಿಯಿಂದಾಗಿ ನಿನ್ನೆ ರಾತ್ರಿಯಿಂದ ಇಂದು ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ತುಡುಕೂರು, ಆಲ್ದೂರು ಹೊಸಳ್ಳಿ, ತೋರಣಮಾವು, ಚಿತ್ತುವಳ್ಳಿ, ಆಲ್ದೂರುಪುರ ಮಡೆನೇರಳು, ದೊಡ್ಡಮಾಗರವಳ್ಳಿ, ಗುಲ್ಲನ್ ಪೇಟೆ, ಹಾಂದಿ, ಕೆಳಗೂರು ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ನಿಷೇಧಾಜ್ಣೆ ಜಾರಿ ಹಿನ್ನೆಲೆಯಲ್ಲಿ 5 ಜ‌ನ ಸೇರುವಂತಿಲ್ಲ, ಕಾರ್ಮಿಕರು ಮನೆಯಿಂದ ಹೊರಬರುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಕಾಫಿ ತೋಟಗಳಲ್ಲಿ ಹಾವಳಿ ಎಬ್ಬಿಸಿರುವ 17 ಆನೆಗಳ ತಂಡದ ಬೀಟಮ್ಮ ಗ್ಯಾಂಗಿನಲ್ಲಿ 1 ಸಲಗ ಸಾವನ್ನಪಿದ್ದು ಸಲಗ ಸತ್ತ ಜಾಗದ ಸುತ್ತಮುತ್ತಲಿನ ಹಳ್ಳಿಗಳಲ್ಲೇ ಈಗಲೂ ಇರುವ ಕಾಡಾನೆ ಹಿಂಡು ಮತ್ತಷ್ಟು ತೊಂದರೆ ಮಾಡುತ್ತಿವೆ. ಸದ್ಯ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸುತ್ತಮುತ್ತಲ ಹಳ್ಳಿಗಳ ಜನರು ಭಯದಲ್ಲಿಯೇ ಜೀವನ ನಡೆಸುವಂತಾಗಿದೆ.

Previous articleವಿಪಕ್ಷ ನಾಯಕರ ಧ್ವನಿ ಕುಗ್ಗಿಸಲು ಕೋವಿಡ್ ಆರೋಪ
Next articleಕಾಂಗ್ರೆಸ್‌ನವರು ಬಾಡಿಗೆ ಲೀಡರ್‌ಗಳನ್ನು ಕರೆತರುತ್ತಿದ್ದಾರೆ