Home ತಾಜಾ ಸುದ್ದಿ ಬಿರ್ಸಾ ಮುಂಡಾ: 150 ರೂಪಾಯಿ ನಾಣ್ಯ ಬಿಡುಗಡೆ

ಬಿರ್ಸಾ ಮುಂಡಾ: 150 ರೂಪಾಯಿ ನಾಣ್ಯ ಬಿಡುಗಡೆ

0
111

ಬಿಹಾರ: ಬಿರ್ಸಾ ಮುಂಡಾ ಅವರ ಚಿತ್ರವಿರುವ 150 ರೂಪಾಯಿಗಳ ನಾಣ್ಯ ಮತ್ತು ಐದು ರೂಪಾಯಿ ಮೌಲ್ಯದ ಅಂಚೆ ಚೀಟಿಗಳನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿದರು.
ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬಿಹಾರದ ಜಮುಯಿಯಲ್ಲಿಂದು ಸುಮಾರು 6 ಸಾವಿರದ 640 ಕೋಟಿ ರೂಪಾಯಿ ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ರಾಷ್ಟ್ರೀಯ ಜನಜಾತಿಯ ಗೌರವ ದಿವಸವಾಗಿದೆ. ಭಗವಾನ್‌ ಬಿರ್ಸಾ ಮುಂಡಾ ಅವರ ಈ 150ನೇ ವರ್ಷಾಚರಣೆಯನ್ನು ಮುಂದಿನ ಒಂದು ವರ್ಷದವರೆಗೆ ವಿವಿಧ ಭಾಗಗಳಲ್ಲಿ ಆಚರಿಸಲಾಗುವುದು, ಸ್ವಾತಂತ್ರ ಸಂಗ್ರಾಮದಲ್ಲಿ ಆದಿವಾಸಿ ಸಮುದಾಯದ ಕೊಡುಗೆ ಅಪಾರವಾಗಿದೆ. ಸಹಸ್ರಾರು ಆದಿವಾಸಿಗಳು ಬಲಿದಾನ ಮಾಡಿದ್ದರು. ಆದರೆ ಸ್ವಾತಂತ್ರದ ಬಳಿಕ ಅವರ ಕೊಡುಗೆಯನ್ನು ನಿರ್ಲಕ್ಷಿಸಲಾಯಿತು. ಒಂದು ಪರಿವಾರದ ಓಲೈಕೆಗಾಗಿ ಆದಿವಾಸಿ ಸಮುದಾಯಕ್ಕೆ ಅನ್ಯಾಯ ಮಾಡಲಾಯಿತು. ಅವರ ಹಕ್ಕುಗಳನ್ನು ಅವರಿಗೆ ನೀಡದೇ ವಂಚಿಸಲಾಯಿತು, ಇತಿಹಾಸದಲ್ಲಿನ ಈ ಬಹುದೊಡ್ಡ ಅನ್ಯಾಯವನ್ನು ದೂರ ಮಾಡುವ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಆದಿವಾಸಿಗಳಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದ ಪ್ರಧಾನಿ, ಈ ಸಮುದಾಯದ ಜನರಿಗೆ ಒಂದೂವರೆ ಕೋಟಿ ಪಕ್ಕಾ ಮನೆಯ ಸ್ವೀಕೃತಿ ಪತ್ರವನ್ನು ನೀಡಲಾಗಿದೆ. ಇಂದು, 11 ಸಾವಿರಕ್ಕೂ ಅಧಿಕ ಆದಿವಾಸಿಗಳು ತಮ್ಮ ಹೊಸ ಮನೆಗಳಿಗೆ ಗೃಹ ಪ್ರವೇಶ ಮಾಡುತ್ತಿದ್ದಾರೆ, ಆದಿವಾಸಿ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಲೆಗಳನ್ನು ನಿರ್ಮಿಸಲಾಗಿದೆ. ಮಕ್ಕಳು ಮತ್ತು ಮಹಿಳೆಯರ ಯೋಗಕ್ಷೇಮಕ್ಕಾಗಿ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ. ಆದಿವಾಸಿ ಕ್ಷೇತ್ರವನ್ನು ಜೋಡಿಸುವ ಹೆದ್ದಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಸಮುದಾಯದ ಕೊಡುಗೆಯನ್ನು ಸ್ಮರಿಸುವ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ ಎಂದರು.