ಬಾವಿಯಲ್ಲಿ ಕಾಲು ಜಾರಿ ಇಬ್ಬರು ಮಕ್ಕಳ ಸಾವು

0
33

ಯಕ್ಸಂಬಾ: ಹೊಳಿ ಬಣ್ಣ ತೊಳೆಯಲು ಹೋದ ಇಬ್ಬರು ಶಾಲಾ ಬಾಲಕರು ಪಟ್ಟಣದ ಹೊರವಲಯದ ಬಾವಿಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಪಟ್ಟಣದ ವೇದಾಂತ ಸಂಜೀವ ಹಿರೇಕೋಡಿ(೯) ಮತ್ತು ಮನೋಜ ಕಾಶಿನಾಥ ಕಲ್ಯಾಣಿ(೮) ಮೃತಪಟ್ಟ ಬಾಲಕರು. ಬಾವಿಯಿಂದ ಮಕ್ಕಳ ಶವಗಳನ್ನು ಅಗ್ನಿಶಾಮಕ ದಳದವರು ಹಾಗೂ ಈಜು ತಜ್ಞರು ಸಂಜೆ ಹೊರತೆಗೆದರು.
ಈ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಜಮಾಯಿಸಿದ್ದರು. ಮಕ್ಕಳ ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಸದಲಗಾ ಪಿಎಸ್‌ಐ ಶಿವಕುಮಾರ ಬಿರದಾರ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡರು.

Previous articleಸಾಲ ಬಾಧೆ: ರೈತ ಆತ್ಮಹತ್ಯೆ
Next articleಸ್ವಾತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಣೆ