ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸಿದ ಗ್ರಾಮಸ್ಥರು

0
37

ವಿಡಿಯೋ ನೋಡಿ ಬಹುಪರಾಕ್‌ ಎಂದ ನೆಟ್ಟಿಗರು

ಶಿರಸಿ: ಬಾವಿಗೆ ಬಿದ್ದ ಚಿರತೆಯನ್ನು ಗ್ರಾಮಸ್ಥರೇ ರಕ್ಷಿಸಿದ ಘಟನೆ ನಡೆದಿದೆ.
ಶಿರಸಿ ತಾಲೂಕಿನ ಜಾನ್ಮನೆ ವಲಯದಲ್ಲಿ ಗ್ರಾಮಸ್ಥರೊಬ್ಬರ ಮನೆಯ ಬಾವಿಗೆ ಬಿದ್ದಿದ್ದ ಚಿರತೆಯನ್ನು ಕಂಡ ಗ್ರಾಮಸ್ಥರು, ಅಲ್ಲಿನ ಅರಣ್ಯ ಇಲಾಖೆಯರ ಸಹಾಯದಿಂದ ಹೊರತೆಗೆದು ಕಾಡಿಗೆ ಅಟ್ಟಿದ ಘಟನೆ ನಡೆದಿದೆ. ಆದರೆ ಈ ಘಟನೆಯಲ್ಲಿ ಗ್ರಾಮಸ್ಥರ ದೈರ್ಯ ಸಾಹಸ ಮೆಚ್ಚಲೇ ಬೇಕು ಏಕೆಂದರೆ ಚಿರತೆಯನ್ನು ಹೊರ ತೆಗೆಯಲು ಅವರು ಬಳಸಿದ ಸಲಕರಣೆ ಕೇವಲ ಹಗ್ಗ ಮತ್ತು ಆ ಹಗ್ಗಕ್ಕೆ ಒಂದು ಕಟ್ಟಗೆ ಮಾತ್ರ, ಇವುಗಳನ್ನು ಬಳಸಿ ಚಿರತೆಯನ್ನು ಹೊರತೆಗೆದು ಕಾಡಿಗೆ ಅಟ್ಟಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ಗ್ರಾಮಸ್ಥರ ಸಾಹಸಕ್ಕೆ ಬಹುಪರಾಕ್‌ ಹೇಳಿದ್ದಾರೆ.

Previous articleಹುಬ್ಬಳ್ಳಿ ಗಲಭೆ ಪ್ರಕರಣ: ಕೇಸ್ ವಾಪಸ್ ಪಡೆದಿದ್ದು ಸರಿಯಾಗಿದೆ
Next articleಹಿಂದೂಗಳ ಎದುರಿಗೆ ಹುಲಿಯ… ಮುಸ್ಲಿಮರ ಎದುರಿಗೆ ಇಲಿಯಾ…