ಬಾದಾಮಿಯಿಂದ ಸರ್ಧಿಸುವಂತೆ ಪಟ್ಟು ಹಿಡಿದ ಸಿದ್ದು ಅಭಿಮಾನಿಗಳು

0
5
ಬಾದಾಮಿ

ಬಾಗಲಕೋಟೆ: ಐದು ಬಾರಿ ಚಾಮುಂಡಿ ಕ್ಷೇತ್ರದ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಮಾಡಿದರೂ ಅಲ್ಲಿ ಜನ ಕೈ ಬಿಟ್ಟಾಗ ಬಾದಾಮಿ ಕ್ಷೇತ್ರದ ಜನ ನನ್ನ ಕೈ ಹಿಡಿದಿದ್ದೀರಿ ನಿಮ್ಮ ಋಣವನ್ನು ಎಂದೂ ತೀರಿಸಲಾರೆ ಎಂದು ಸಿದ್ದರಾಮಯ್ಯ ಕ್ಷೇತ್ರ ತೊರೆಯುವ ವಿದಾಯದ ಭಾಷಣಕ್ಕೆ ಮುಂದಾದ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಸುತ್ತುವರಿದು ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಆಗ್ರಹಿಸಿದ ಘಟನೆ ನಡೆಯಿತು.
ಬಾದಾಮಿ ಪಟ್ಟಣದ ಎಪಿಎಂಸಿ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ್ದ ಅವರು ಬಾದಾಮಿ ತೊರೆಯುವ ಮಾತುಗಳನ್ನಾಡುತ್ತಿದ್ದಂತೆ ಅವರ ಬೆಂಬಲಿಗರು, ಅಭಿಮಾನಿಗಳು ಮತ್ತೊಮ್ಮೆ ಬಾದಾಮಿ ಎಂದು ಘೋಷಿಸಯವಂತೆ ಪಟ್ಟು ಹಿಡಿದರು. ಜನರನ್ನು ಸಾಕಷ್ಟು ಅವರು ಸಮಾಧಾನಪಡಿಸಲು ಮುಂದಾದರೂ ಜನ ಸುಮ್ಮನಾಗದಿದ್ದಾಗ ಅರ್ಜಿಯಲ್ಲಿ ಕೋಲಾರ, ಬಾದಾಮಿ, ವರುಣಾ ಕ್ಷೇತ್ರಗಳನ್ನು ಉಲ್ಲೇಖಿಸಿದ್ದೇನೆ. ಹೈಕಮಾಂಡ್ ಸೂಚಿಸಿದರೆ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಭರವಸೆ ನೀಡಿದ ನಂತರ ಜನ ಸುಮ್ಮನಾದರು.
ಚೂರಿಯಿಂದ ಇರಿದುಕೊಳ್ಳಲು ಯತ್ನಿಸಿದ ಅಭಿಮಾನಿ
ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬ ಬಾದಾಮಿಯಿಂದಲೇ ಸ್ಪರ್ಧೆಗೆ ಒತ್ತಾಯಿಸಿ ಚೂರಿಯಿಂದ ಇರಿದುಕೊಳ್ಳಲು ಯತ್ನಿಸಿದ ಘಟನೆ ಕಾರ್ಯಕ್ರಮದಲ್ಲಿ ನಡೆಯಿತು.
ರಕ್ತದಲ್ಲಿ ಅಭಿಮಾನಿ ಪತ್ರ..!
ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸಿ ಗುಳೇದಗುಡ್ಡ ಪುರಸಭೆ ಸದಸ್ಯ ಗೋಪಾಲ ಭಟ್ಟಡ ಅವರಹ ರಕ್ತದಲ್ಲಿ ಬರೆದ ಪತ್ರವನ್ನು ಸಿದ್ದರಾಮಯ್ಯ ಅವರಿಗೆ ನೀಡಿದರು.

Previous articleಪಿಂಚಣಿ ಸಮಸ್ಯೆ ಪರಿಹರಿಸಲು ಸಮಿತಿ ರಚನೆ: ಸೀತಾರಾಮನ್ ಭರವಸೆ
Next articleನೇಕಾರರಿಗೆ ಟಿಕೆಟ್‌ ನೀಡಲು ಸ್ವಾಮೀಜಿಗಳಿಂದ ಒತ್ತಾಯ