ಬಾಂಬ್ ಸ್ಫೋಟ: ನಾಯಿ ಸಾವು

0
13

ಪಣಜಿ: ಬಾಯಲ್ಲಿ ಬಾಂಬ್ ಸ್ಫೋಟಗೊಂಡು ಸಾಕು ನಾಯಿ ಸಾವನ್ನಪ್ಪಿದ ಘಟನೆ ಗೋವಾದ ಲತಾಂಬರಸೆ ಪಂಚಾಯತ್ ವ್ಯಾಪ್ತಿಯ ಕಾಸರ್ಪಾಲ್ ಗ್ರಾಮದ ಬಳಿ ಈ ಆಘಾತಕಾರಿ ಘಟನೆ ನಡೆದಿದೆ. ಜನವಸತಿ ಪ್ರದೇಶದಲ್ಲಿ ನಡೆದಿರುವ ಈ ಮಾರಣಾಂತಿಕ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾಡು ಹಂದಿಯನ್ನು ಬೇಟೆಯಾಡಲು ಇಟ್ಟಿದ್ದ ಹಳ್ಳಿ ಬಾಂಬ್ ಅನ್ನು ನಾಯಿ ನುಂಗಿದ ಕಾರಣ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ, ಕಾಸರ್ಪಾಲ್‌ನಲ್ಲಿ ಕಾಡುಹಂದಿಗಳನ್ನು ಬೇಟೆಯಾಡಲು ಗ್ರಾಮಸ್ಥರು ಬಾಂಬ್‌ಗಳನ್ನು ಬಳಸುತ್ತಿರುವುದು ಸ್ಪಷ್ಟವಾಗುತ್ತಿದ್ದಂತೆ ಘಟನೆ ಸ್ಥಳೀಯರಲ್ಲಿ ಸಂಚಲನ ಮೂಡಿಸಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿ ಬಾಂಬ್ ಎಸೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Previous articleಭಾರತ ಐದನೇ ಆರ್ಥಿಕ ಶಕ್ತಿ ವಲಯ
Next articleಎಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು