ಬಸ್ಸಿನ ಎಕ್ಸೆಲ್ ಕಟ್ : 18 ಜನರಿಗೆ ಗಾಯ

0
19

ಹುಬ್ಬಳ್ಳಿ: ಬಸ್ ಎಕ್ಸೆಲ್ ಕಟ್ ಆಗಿ ರಸ್ತೆ ಬದಿಯ ಕಂಪೌಂಡ್‌ಗೆ ಗುದಿದ್ದ ಘಟನೆ ಗದಗ ರಸ್ತೆಯಲ್ಲಿ‌ ನಡೆದಿದ್ದು, 18 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗದಗದಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಬಸ್ ಐಟಿಸಿ ಗೋಡೌನ್ ಬಳಿಯಲ್ಲಿ ಬಸ್ಸಿನ ಎಕ್ಸೆಲ್ ಏಕಾಏಕಿ ಕಟ್ ಆದ ಪರಿಣಾಮ ವೇಗವಾಗಿ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಐಟಿಸಿ ಗೋಡೌನ್ ಬಳಿಯಲ್ಲಿನ ಕಂಪೌಂಡ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದಾಗಿ ಬಸ್ಸಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

Previous articleಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ಭೇಟಿ: ಸಾರ್ವಜನಿಕರಿಗೆ ಸಂಚಾರ ಮಾರ್ಗ ಸೂಚಿ
Next article`ಸಿಬ್ಬಂದಿ ಶಾಶ್ವತ ಹಂಚಿಕೆ ನಿಯಮ’ ತಂದ ಸಂಕಷ್ಟ