ಬಸ್ ಸ್ಟ್ಯಾಂಡ್‌‌ ನಲ್ಲಿ‌ದ್ದ KSRTC ಬಸ್ ಕದ್ದ ಕಳ್ಳರು

0
24

ಕಲಬುರಗಿ: ನಿನ್ನೆ ತಡರಾತ್ರಿ ಬಸ್ ನಿಲ್ದಾಣದಲ್ಲಿದ್ದ ನಿಲ್ಲಿಸಿದ್ದ ಬಸ್ ನ್ನೇ ಚಾಲಾಕಿ ಕಳ್ಳರು ಕದ್ದೊಯ್ದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೀದರ್ ಬಸ್ ಡಿಪೋ ನಂಬರ್ 2 ಕ್ಕೆ ಸೇರಿದ ಸರ್ಕಾರಿ ಬಸ್ KA38 F 971 ನಂಬರ್ ನ ಬಸ್ ಕಳ್ಳತನ ಮಾಡಿದ ಮಾಡಲಾಗಿದೆ.
ನಸುಕಿನ ಜಾವ 3:30ರ ಸುಮಾರಿಗೆ ಬಸ್ ಕಳ್ಳತನ ಮಾಡಿದ ಖದೀಮರು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯವ್ಯಕ್ತವಾಗಿದೆ.
ಬಸ್ ಹುಡುಕಾಟಕ್ಕಾಗಿ ಎರಡು ಪೊಲೀಸ್ ಟೀಮ್ ತೆಲಂಗಾಣಕ್ಕೆ ತೆರಳಿದ್ದು, ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous article‘ಆಪರೇಷನ್ ಎಲಿಫೆಂಟ್’ ಆರಂಭ
Next articleಹಂಪಿ ಕನ್ನಡ ವಿವಿ ನೂತನ ಕುಲಪತಿಯಾಗಿ ಪೂಣಚ್ಚ ನೇಮಕ