ಬಸ್ ಬೈಕ್ ಮಧ್ಯೆ ಡಿಕ್ಕಿ ಸ್ಥಳದಲ್ಲಿಯೇ ಮೂವರು ಸಾವು

0
14


ರಾಯಚೂರು: ಬಸ್ ಮತ್ತು ದ್ವಿಚಕ್ರವಾಹನ ಮಧ್ಯೆ ಡಿಕ್ಕಿ ಸ್ಥಳದಲ್ಲಿಯೇ ಮೂವರು ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ಮಸ್ಕಿ ತಾಲ್ಲೂಕಿನ ಗುಡದೂರು ಕಾಲುವೆ ಸಮೀಪ ನಡೆದಿದೆ.ಆಂಧ್ರಪ್ರದೇಶ ದ ಕರ್ನೂಲ್ ಜಿಲ್ಲೆಯ ಮೂಲದವರಾದ ನಾಗರಾಜ(32), ಶ್ರೀನಿವಾಸಲು(26), ಜಯಪಾಲ(22) ಎಂಬುವವರು ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಒರ್ವ ವ್ಯಕ್ತಿ ಶ್ರೀಕಾಂತ ಎಂಬುವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಭತ್ತ ರಾಶಿ ಮಾಡುವ ಮಿಷನ್ ಕೆಲಸ ಮಾಡುವವರಾಗಿದ್ದಾರೆ. ಮಸ್ಕಿ ತಾಲ್ಲೂಕಿನ ಗುಡದೂರು ಗ್ರಾಮದ ವ್ಯಾಪ್ತಿಯಲ್ಲಿ ಭತ್ತದರಾಶಿ ಮಾಡುವ ಮಿಷನ್ ಕೆಲಸ ಮಾಡಲು ಆಗಮಿಸಿದ್ದ ಹಿನ್ನೆಲೆಯಲ್ಲಿ ಊಟ ಮಾಡಲು ಮಸ್ಕಿ ಪಟ್ಟಣಕ್ಕೆ ಬಂದು ಊಟ ಮಾಡಿ ಮರಳಿ ಗುಡದೂರು ಗ್ರಾಮದ ಸಮೀಪದಲ್ಲಿರು ಭತರಾಶಿ ಮಾಡುವ ಮಿಷನ್ ಕಡೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಮಸ್ಕಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Previous articleಮಹಾರಾಷ್ಟ್ರಕ್ಕೆ ಒಂದಿಂಚು ಭೂಮಿ ಬಿಟ್ಟುಕೊಡಲ್ಲ: ಖಂಡ್ರೆ
Next articleಬೆಳಗಾವಿ ಪೊಲೀಸರು ಮಹಾರಾಷ್ಡ್ರ ಸಚಿವರು, ಶಾಸಕರನ್ನ ತಡೆಯಲಿ, ನಮ್ಮನ್ನಲ್ಲ: ಕರವೇ ನಾರಾಯಣಗೌಡ