ಬಸ್ ಪಲ್ಟಿ: ೨೦ ಜನ ಪ್ರಯಾಣಿಕರಿಗೆ ಗಾಯ

0
38

ಪ್ರಾಣಾಪಾಯದಿಂದ ಪಾರಾದ ೧೦೭ ಜನ ಪ್ರಯಾಣಿಕರು: ಏಕಾಏಕಿ ಕುರಿಗಳು ಅಡ್ಡ ಬಂದಿದ್ದರಿಂದ ಚಾಲಕ ಬಸ್ ಸೈಡಿಗೆ ಎಳೆದ ಪರಿಣಾಮ ಬಸ್ ಪಲ್ಟಿ

ದಾವಣಗೆರೆ: ಕೆಎಸ್‌ಆರ್‌ಟಿಸಿ ಬಸ್ಸೊಂದು ಪಲ್ಟಿಯಾಗಿ ಬಸ್ ಚಾಲಕ ಸೇರಿ ಸುಮಾರು ೨೦ ಜನ ಪ್ರಯಾಣಿಕರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ತಾಲೂಕಿನ ಹುಲಿಕಟ್ಟೆ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.
ಭರಮಸಾಗರ-ಹಾಲೇಕಲ್ ಗ್ರಾಮದ ಮೂಲಕ ಅಣಜಿ-ದಾವಣಗೆರೆ ಬರುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಸುಮಾರು ೧೦೭ ಜನ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ. ಸುಮಾರು ೧೦ ರಿಂದ ೨೦ ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್ ಚಾಲಕನಿಗೂ ಪೆಟ್ಟು ಬಿದ್ದಿದೆ.
ಹಾಲೇಕಲ್ ಗ್ರಾಮಕ್ಕೆ ಬರುತ್ತಿದ್ದ ಬಸ್ ಎದುರು ಏಕಾಏಕಿ ಕುರಿಗಳು ಅಡ್ಡ ಬಂದಿದ್ದರಿಂದ ಬಸ್ ಚಾಲಕ ಬಸ್ಸನ್ನು ಸೈಡ್‌ಗೆ ಎಳೆದ್ದಿದ್ದಾನೆ. ಮೊದಲೇ ಮಳೆ ಬಂದಿದ್ದರಿಂದ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಕೋವಿಡ್ ಪ್ರಕರಣ : ಮಾರ್ಗಸೂಚಿ ಬಿಡುಗಡೆ
Next articleಇನ್‌ಸ್ಟಾಗ್ರಾಂ ಲಿಂಕ್ ನಂಬಿ 51 ಲಕ್ಷ ಕಳೆದುಕೊಂಡ ವ್ಯಾಪಾರಿ