ಬಳ್ಳಾರಿ:‌ ಕೋವಿಡ್‌ಗೆ ಮೊದಲ ಬಲಿ

0
13

ಬಳ್ಳಾರಿ: ಮೂರನೇ ಅಲೆಯ ಕೋವಿಡ್‌ಗೆ ಬಳ್ಳಾರಿಯಲ್ಲಿ ಮೊದಲ ಬಲಿ ಆಗಿದ್ದು, ಮೃತನ ವಿವರ ಇನ್ನು ತಿಳಿದುಬಂದಿಲ್ಲ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಪ್ರತ್ಯೇಕ ವಾಸದಲ್ಲಿ ಇದ್ದ ರೋಗಿ ಮರಣ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಇದೀಗ ಒಂದು ಸಾವು ಕಂಡಿರುವುದು ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಹಾಲಿ 35 ಸಕ್ರಿಯ ಪ್ರಕರಣ ಇವೆ. ಇಂದು ಹೊಸದಾಗಿ 6 ಪ್ರಕರಣ ಕಂಡುಬಂದಿವೆ. ಇಂದು ವರದಿಯಾದ ಆರು ಪ್ರಕರಣಗಳ ಪೈಕಿ ಬಳ್ಳಾರಿ ತಾಲೂಕಿನ ಐವರಿಗೆ ಸೋಂಕು ತಗುಲಿದರೆ ಸಂಡೂರು ತಾಲೂಕಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.

Previous article೯೮.೬೮ ಲಕ್ಷ ಮೌಲ್ಯದ ಅಕ್ರಮ ಚಿನ್ನ ವಶ
Next articleರಾಮಮಂದಿರ ಉದ್ಘಾಟನೆ: ಜ. 22ರಂದು ಶಾಲಾ-ಕಾಲೇಜುಗಳಿಗೆ ರಜೆ