Home Advertisement
Home ಅಪರಾಧ ಬಳ್ಳಾರಿ ಕೇಂದ್ರಕಾರಗೃಹಕ್ಕೆ ಎಸ್ಪಿ ದಿಢೀರ್ ಭೇಟಿ

ಬಳ್ಳಾರಿ ಕೇಂದ್ರಕಾರಗೃಹಕ್ಕೆ ಎಸ್ಪಿ ದಿಢೀರ್ ಭೇಟಿ

0
93

ಬಳ್ಳಾರಿ: ಕೊಲೆ ಆರೋಪಿ, ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಸ್ಥಳಾಂತರ ಹಿನ್ನೆಲೆಯಲ್ಲಿ ಕಾರಗೃಹಕ್ಕೆ ಜಿಲ್ಲಾ ಪೊಲೀಸ್ ‌ವರಿಷ್ಟಾಧಿಕಾರಿ ಡಾ.ಶೋಭರಾಣಿ ದಿಢೀರ್‌ ಆಗಮಿಸಿದ್ದಾರೆ.
ದರ್ಶನ್ ನನ್ನು ಮಧ್ಯಾಹ್ನ ಶಿಫ್ಟ್ ಮಾಡುವ ಸೂಚನೆ ದೊರೆತಿದ್ದು ಜೈಲಿಗೆ ಆಗಮಿಸಿ ಇಲ್ಲಿನ ಪರಿಸ್ಥಿತಿ ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದಾರೆ. ಜೈಲು ಸೆಲ್ ಗಳ ಪರಿಸ್ಥಿತಿ, ಆರೋಪಿಗಳ ಸಂಖ್ಯೆ, ವಿವರ ಹಾಗೂ ಹೊರ ಭದ್ರತಾ ವಿಭಾಗದಲ್ಲಿ ನ ಸೆಲ್ ಗಳ ಮಾಹಿತಿ ಪಡೆದರು. ದರ್ಶನ್ ಶಿಫ್ಟ್ ಮಾಡುವ ಸೆಲ್, ಅಲ್ಲಿನ ಸ್ಥಿತಿಗತಿ, ಸಿಸಿ ಕ್ಯಾಮರಾಗಳ ಕಣ್ಗಾವಲು ಸೇರಿ ಸೂಕ್ತ ಭದ್ರತೆ ಇರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

Previous articleಮಾಜಿ ಸಚಿವ ನಾಗೇಂದ್ರ ಆಪ್ತರ ಮೇಲೆ ಮತ್ತೆ‌ ಇಡಿ ದಾಳಿ
Next articleರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ