ಬಂದ್‌: ದಕ್ಷಿಣ ಕನ್ನಡದಲ್ಲಿ ಎಂದಿನಂತೆ ಜನಜೀವನ

0
24

ಮಂಗಳೂರು: ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಜನಜೀವನ ಎಂದಿನಂತಿದೆ.
ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಿದೆ. ಆಟೋರಿಕ್ಷಾಗಳು ಮತ್ತು ಕ್ಯಾಬ್‌ಗಳು ಸೇವೆಯಲ್ಲಿವೆ. ಅಂಗಡಿಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸಿದವು. ಯಾವುದೇ ಅಂಗಡಿಗಳು, ಸಂಸ್ಥೆಗಳು ಮುಚ್ಚಿಲ್ಲ. ಜಿಲ್ಲೆಯ ಯಾವುದೇ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲಿಲ್ಲ ಮತ್ತು ನಗರಗಳಲ್ಲಿ ಯಾವುದೇ ಪ್ರತಿಭಟನೆಗಳನ್ನು ನಿಗದಿಪಡಿಸಲಾಗಿರಲಿಲ್ಲ. ಎಲ್ಲಾ ಚಟುವಟಿಕೆಗಳು ಸುಗಮವಾಗಿ ಸಾಗುತ್ತಿರುವುದರಿಂದ, ಜನರು ಯಾವುದೇ ತೊಂದರೆಗಳಿಲ್ಲದೆ ಜನ ಜೀವನ ನಡೆದಿದೆ.

Previous articleರೇಬಿಸ್‌ಗೆ ಮಹಿಳೆ ಬಲಿ
Next articleಡಿಕೆಶಿ ಕ್ಷಮೆ ಕೇಳಲು 24ರವರೆಗೆ ಗಡುವು