ಬಂಡೀಗುಡ್ಡದಲ್ಲಿ ಆನೆ ತುಳಿತಕ್ಕೆ ವ್ಯಕ್ತಿ ಸಾವು: ಸಾರ್ವಜನಿಕರಿಂದ ಪ್ರತಿಭಟನೆ

ಭದ್ರಾವತಿ: ಆನೆ ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಭದ್ರಾವತಿ ತಾಲ್ಲೂಕಿನ‌ ಬಂಡೀಗುಡ್ಡದಲ್ಲಿ ನಿನ್ನೆ ರಾತ್ರಿ ನಡೆದಿದೆ.
ತಾಲೂಕಿನ ಬಂಡಿಗುಡ್ಡ ಗ್ರಾಮದ ಕುಮಾರ್ (53) ಮೃತ ದುರ್ದೈವಿಯಾಗಿದ್ದಾನೆ. ವಿಐಎಸ್ ಎಲ್ ಭೂಮಿಯ ಕಾವಲು ಕಾಯಲು ಹೋಗುವಾಗ ಆನೆ ತುಳಿದಿದೆ. ಬಂಡಿಗುಡ್ಡ ಗ್ರಾಮವು ಕುಗ್ರಾಮವಾಗಿದ್ದು ಅರಣ್ಯದೊಳಗೆ ಇದೆ. ಈ ಭಾಗದಲ್ಲಿ ಒಂಟಿ ಸಲಗವೊಂದು ಸಂಚಾರದಲ್ಲಿದ್ದು ಅದೇ ತುಳಿದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ 9.30ರ ಹೊತ್ತಿಗೆ ಘಟನೆ ನಡೆದಿದ್ದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬದ್ನೆಹಾಳ್ ಮತ್ತು ಬಂಡಿಗುಡ್ಡ ವಿಐಎಸ್ ಎಲ್ ಕಾಡಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕುಮಾರ್ ರಾತ್ರಿ ಊಟ ಮಾಡಿ ಕೆಲಸಕ್ಕೆ ಹೋಗುವಾಗ ಈ ದಾಳಿ ನಡೆದಿದೆ. ಮೃತನ ಪರವಾಗಿ ಪ್ರತಿಭಟನೆ ನಡೆದಿದೆ. ಈ ಕುರಿತು ಮಾತನಾಡಿದ ಭದ್ರಾವತಿಯ ಡಿಸಿಎಫ್ ಆಶಿಶ್ ರೆಡ್ಡಿ ಆನೆಯ ಮೂಮೆಂಟ್ ನೋಡಿ ಕೂಬಿಂಗ್ ಡ್ರೈವ್ ನಡೆದಿದೆ. ಬಂಡಿಗುಡ್ಡದಲ್ಲಿ 44 ಹೆಕ್ಟೇರ್ ಕಾಡಿದೆ ಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ 20 ಲಕ್ಷ ಪರಿಹಾರವಿದೆ. ಪಿಎಂ ರಿಪೋರ್ಟ್ ಬಂದ ನಂತರ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.