ಫೋನ್ ಪೇ… ಗೂಗಲ್ ಪೇ ಅಷ್ಟೇ

ಜಾಬ್ ಸ್ಟೀವ್ ಅವರ ಪತ್ನಿ ಲಾರೆನ್ಸ್ ಪೋವೆಲ್ ಕುಂಭಮೇಳಕ್ಕೆ ಬಂದ ಕೂಡಲೆ ಆಕೆಯನ್ನು ಎತ್ತಿಕೊಂಡು ಹೋಗಿ ಬೇರೆ ಡ್ರೆಸ್ ಹಾಕಿಸಿ ಕೊರಳಲ್ಲಿ ರುದ್ರಾಕ್ಷಿ ಮಾಲೆ ಹಾಕಿ, ಹಣೆಗೆ ಇಷ್ಟುದ್ದ ಕುಂಕುಮ ಹಚ್ಚಿ ಹ್ರಾಂ..ಹೋಂ…ಟ್ರಾಂ ಎಂದು ಕೆಟ್ಟದನಿಯಲ್ಲಿ ಕೂಗುತ್ತ…. ಇನ್ಮೇಲೆ ನಿನ್ನ ಹೆಸರು ಕಮಲಾ ಉರ್ಫ್ ಕಮಲಮ್ಮ ಎಂದು ಜೋರಾಗಿ ಒದರಿದಾಗ ಆಕೆ ಕಿವಿ ಮರಗುಟ್ಟಿ ಹೋದವಂತೆ. ಈ ಜನರು ಏನು ಹೇಳುತ್ತಿದ್ದಾರೆಂದು ಒಂದೂ ತಿಳಿಯದಂತೆ ಮುಖ ಮಾಡಿದಳು. ಇದೆಂಥ ಹೆಸರು? ನನಗ್ಯಾಕೆ ಈ ಹೆಸರು ಇಟ್ಟರು ಎಂದು ತಲೆ ಕೆಡೆಸಿಕೊಂಡು ಔಷಧಿ ಅಂಗಡಿಗೆ ಹೋಗಿ ಡೋಲೋ ತೆಗೆದುಕೊಂಡಳು. ದಾರಿಯಲ್ಲಿ ಹೋಗುವವರು ಏನ್ ಕಮಲಾ ಅಂದರೆ, ಬರುವವರೆಲ್ಲ ಏನ್ ಕಮಲಮ್ಮಾ ಅನ್ನತೊಡಗಿದರು. ಆಕೆ ಸ್ಟಾçಂಗ್ ಕಾಫಿ ಕುಡಿದರೂ ತಲೆನೋವು ಕಡಿಮೆಯಾಗಲಿಲ್ಲ. ನನ್ನ ಹಸ್ಬಂಡ್ ಎಂಥ ಮಹಾನ್ ವ್ಯಕ್ತಿ. ನನಗೆ ಈ ಹೆಸರು ಇಟ್ಟವರನ್ನು ಕಂಡು ಹಿಡಿಯಲಾಗುತ್ತಿಲ್ಲವಲ್ಲ ಎಂದು ಮರುಗಿದರು. ಕೊನೆಗೆ ಹಿಡಿದ ಕೆಲಸ ಬಿಡಬಾರದು ಎಂದು ಸಂಕಲ್ಪ ಮಾಡಿಕೊಂಡು ಅದರ ಬೆನ್ನು ಬಿದ್ದರು. ಸೀದಾ ಲಾದುಂಚಿ ರಾಜನನ್ನು ಕಂಡು ಏನಿದೆಲ್ಲ ಅಂದಳು. ಆಗ ರಾಜ ನನಗೆ ನಿಜವಾಗಿಯೂ ಗೊತ್ತಿಲ್ಲ. ಬೇಕಾದರೆ ಲೊಂಡೆನುಮನನ್ನು ಕೇಳಿ ಎಂದು ಅವನ ಮೊಬೈಲ್ ನಂಬರ್ ಕೊಟ್ಟ. ಆಕೆ ಆ ನಂಬರ್‌ಗೆ ಕಾಲ್ ಮಾಡಿದಾಗ ಲೊಂಡೆನುಮ ಹಿಯರ್ ಅಂದ. ಆಕೆ ಇಂಗ್ಲಿಷಿನಲ್ಲಿ ವೈ ಮೈ ನೇಮ್ ಇಸ್ ಚೇಂಜ್ಡ್ ಯು ನೋ? ಅಂದಳು. ಅದಕ್ಕೆ ಲೊಂಡೆನುಮ ಎಲ್ಲಿದ್ರೀ ಮೇಡಂ. ಈಗ ಏನಿದ್ದರೂ ಸ್ಕಾö್ಯನರ್, ಫೋನ್ ಪೇ ಗೂಗಲ್ ಪೇ. ಹಂಗಾಗಿ ಚೇಂಜೇ ಇರಲ್ಲ ಬುಡ್ರಿ ಅಂದ. ತಲೆಕೆಟ್ಟ ಅಕೆ ನನ್ನ ಹೆಸರು ಕಮಲಾ ಎಂದು ಬದಲಿ ಮಾಡಿರಿ ಎಂದು ಹೇಳಿದ್ದು ನೀವಾ? ಎಂದು ಕೇಳಿದಳು. ನೋ ವೇ…ನಾನು ಬೇಕಾದರೆ ದೇವರ ಪಾದ ಮುಟ್ಟಿ ಹೇಳುತ್ತೇನೆ, ನೀವು ಒಂದು ಕೆಲಸ ಮಾಡಿ ಎಂದು ಗುತ್ನಾಳ್ ಡಗೌರ ನಂಬರ್ ಕೊಟ್ಟ…ಅವರಿಗೆ ಕಾಲ್ ಮಾಡಿದಾಗ…ಅಯ್ಯೋ ಅವರರೀ…ಪೂಜ್ಯ ಅಪ್ಪಾರು ಎಂದು ಹೇಳಿದ. ಅವರನ್ನು ಕೇಳಿದಾಗ ಇನ್ಯಾರದ್ದೋ ಹೆಸರು ಹೇಳಿದರು. ಕೊನೆಗೆ ತನಗೆ ಹೆಸರು ಇಟ್ಟವರಿಗೆ ಹೋಗಿ ಬಿಡದೇ ಗಂಟು ಬಿದ್ದಾಗ ಅವರು ಸೋದಿ ಮಾಮಾನ ಹೆಸರು ಹೇಳಿದಳು. ಸೋದಿಮಾಮಾಗೆ ಏನ್ರೀ ಇದೆಲ್ಲ ಎಂದು ಕೇಳಿದರೆ…ಅದೊಂದೇ ಹೆಸರು…ಆ ಹೆಸರಿದ್ದರೆ ನಾವೆಲ್ಲ ಅದು ಇಲ್ಲದಿದ್ದರೆ ನಾವಿಲ್ಲ..ನಾವಿಲ್ಲ…ಅದಕ್ಕೆ ಅ ಹೆಸರು ಎಂದು ಹೇಳಿ ಪೋನ್ ಕಟ್ ಮಾಡಿ ಸ್ವಿಚ್ಡಾಫ್ ಮಾಡಿದರು.