ಫೈನಾನ್ಸ್ ಕಂಪನಿ ಕಿರುಕುಳದಿಂದ ನದಿಗೆ ಹಾರಿದ್ದ ಶಿಕ್ಷಕಿಯ ಶವ ಪತ್ತೆ

0
29

ದಾವಣಗೆರೆ: ಫೈನಾನ್ಸ್ ಕಂಪನಿ ಕಿರುಕುಳದಿಂದ ಸರ್ಕಾರಿ ಶಾಲೆಯ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕಿಯ ಶವ ಇಂದು ತುಂಗಭದ್ರಾ ನದಿಯಲ್ಲಿ ಪತ್ತೆಯಾಗಿದೆ.
ರಟ್ಟಿಹಳ್ಳಿ ತಾಲ್ಲೂಕಿನ ತಿಮ್ಮನಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪುಷ್ಪ ಲತಾ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕಿಯ ಶವ ಎರಡು ದಿನದ ನಂತರ ಪತ್ತೆಯಾಗಿದೆ. ಹೊನ್ನಾಳಿ ಪಟ್ಟಣದ ನಿವಾಸಿ ಪುಷ್ಪಲತಾ ಅವರ ಪತಿ ಹಾಲೇಶ್ ಅನುದಾನಿತ ಶಾಲೆಯ ಶಿಕ್ಷಕ. ಈ ದಂಪತಿ ಮನೆ ಕಟ್ಟಲು ಸುಮಾರು 30 ಲಕ್ಷಕ್ಕೂ ಹೆಚ್ಚು ಹಣ ಫೈನಾನ್ಸ್ ಕಂಪನಿಯಲ್ಲಿ ಸಾಲ ಮಾಡಿದ್ದರು. ಸಾಲ ಮರುಪಾವತಿ ಮಾಡದ್ದರಿಂದ ಫೈನಾನ್ಸ್ ಕಂಪನಿ ದಂಪತಿಗೆ ನೋಟೀಸ್ ನೀಡಿದ್ದರು. ಅಷ್ಟೇ ಅಲ್ಲದೆ ಸಾಲ ಮರುಪಾವತಿ ಮಾಡುವಂತೆ ಮನೆಗೆ ತೆರೆಳಿದ್ದ ವೇಳೆ ದಂಪತಿ ಹಲ್ಲೆ ನಡೆಸಿದ್ದರು ಎಂದು ಫೈನಾನ್ಸ್ ಕಂಪನಿ ಪೊಲೀಸರಿಗೆ ದೂರು ನೀಡಿತ್ತು. ನಂತರ ಪೊಲೀಸರು ಎರಡು ಕಡೆಯವರನ್ನು ಕರೆಸಿ, ವಿಚಾರಣೆ ನಡೆಸಿದ ನಂತರ ಫೈನಾನ್ಸ್ ಕಂಪನಿ ದೂರು ವಾಪಸ್ಸು ಪಡೆದಿತ್ತು.

Previous articleಮತ್ತೋರ್ವ ನಕ್ಸಲ್ ಶರಣಾಗುವ ಸಾಧ್ಯತೆ
Next articleವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ದಿನಾಂಕ ನಿಗದಿ