ಫೈನಲ್ ಪ್ರವೇಶಿಸಿದ ಬೋಪಣ್ಣ

0
7

ನ್ಯೂಯಾರ್ಕ್: ೧೪೩ನೇ ಆವೃತ್ತಿಯ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಭಾರತದ ಅನುಭವಿ ಹಾಗೂ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಪುರುಷರ ಡಬಲ್ಸ್ನಲ್ಲಿ ಅಂತಿಮ ಘಟ್ಟ ತಲುಪಿದ್ದಾರೆ. ಇಲ್ಲಿನ ಲೂಯಿಸ್ ಆರ್ಮ್‌ಸ್ಟ್ರಾಂಗ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರೆಂಚ್ ಜೋಡಿ ಪಿಯರೆ ಹ್ಯೂಸ್ ಹರ್ಬರ್ಟ್ ಮತ್ತು ನಿಕೋಲಸ್ ಮಹುತ್ ವಿರುದ್ಧ ನೇರ ಸೆಟ್‌ಗಳ ಜಯದೊಂದಿಗೆ ಫೈನಲ್ ಪ್ರವೇಶ ಪಡೆಯುವ ಮೂಲಕ ಐಸಿಹಾಸಿಕ ಸಾಧನೆ ಮಾಡಿದ್ದಾರೆ.
ಆರನೇ ಶ್ರೇಯಾಂಕದ ಬೋಪಣ್ಣ-ಎಬ್ಡೆನ್ ಜೋಡಿ ಸೆಮಿಫೈನಲ್‌ನಲ್ಲಿ ಹರ್ಬರ್ಟ್-ನಿಕೋಲಸ್ ಮಹುತ್ ಜೋಡಿಯನ್ನು ೭-೬(೭-೩), ೬-೨ ನೇರ ಸೆಟ್‌ಗಳಿಂದ ಮಣಿಸಿತು. ಇಂಡೋ- ಆಸ್ಟ್ರೇಲಿಯನ್ ಜೋಡಿ ಈ ವರ್ಷ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲೂ ಸೆಮಿಫೈನಲ್ ತಲುಪಿತ್ತು. ಫೈನಲ್‌ನಲ್ಲಿ ಬೋಪಣ್ಣ ಮತ್ತು ಎಬ್ಡೆನ್ ಜೋಡಿ ಮೂರನೇ ಶ್ರೇಯಾಂಕದ ಅಮೆರಿಕದ ರಾಜೀವ್ ರಾಮ್ ಮತ್ತು ಗ್ರೇಟ್ ಬ್ರಿಟನ್‌ನ ಜೋ ಸಾಲಿಸ್‌ಬರಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದ್ದಾರೆ.

ಕೊಡಗಿನ ಕುವರ ೪೩ರ ಹರೆಯದ ರೋಹನ್ ಬೋಪಣ್ಣ ಟೆನಿಸ್ ಓಪನ್ ಯುಗದಲ್ಲಿ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.

Previous articleಜೈಲರ್ ಚಿತ್ರದ ನಟ ‘ಮಾರಿಮುತ್ತು’ ಹೃದಯಘಾತದಿಂದ ಸಾವು
Next articleಯುಎಸ್ ಮಾಜಿ ಅಧ್ಯಕ್ಷರೊಂದಿಗೆ ಧೋನಿ ಗಾಲ್ಫ್ ಆಟ