ಪ್ರಮಾಣವಚನ ಸಮಾರಂಭ ಮುಂದೂಡಿ ಎಂದ ಸಂತೋಷ

0
21

ಪ್ರಧಾನಿ ಮೋದಿ ರೋಡ್‌ ಶೋದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಈ ಹಿಂದೆ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ ಅವರ ಟ್ವೀಟ್‌ನ್ನು ಕೋಟ್‌ ಮಾಡಿ ರೀ-ಟ್ವೀಟ್‌ ಮಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.
“ನಮ್ಮ ನಿಯೋಜಿತ ಸಿಎಂ ಈ ಟ್ವೀಟ್ ಮಾಡಿ ಹಲವು ದಿನಗಳು ಕಳೆದಿಲ್ಲ. ನಾಳೆ ರಾಜ್ಯ ಮತ್ತು ಬೆಂಗಳೂರಿನಾದ್ಯಂತ ಸಿಇಟಿ ಪರೀಕ್ಷೆಗಳು. ನಡೆಯುತ್ತಿದ್ದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಿಮ್ಮ ಪ್ರಮಾಣ ವಚನ ಸ್ವೀಕಾರವನ್ನು ಒಂದು ಅಥವಾ ಎರಡು ದಿನ ಮುಂದೂಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ.” ಎಂದು ಟ್ವೀಟ್‌ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜನರು ಇದು ರೋಡ್‌ ಶೋ ಅಲ್ಲ ಒಂದು ಕ್ರೀಡಾಂಗಣದಲ್ಲಿ ಮಾತ್ರ ನಡೆಯುವ ಕಾರ್ಯಕ್ರಮ ಎಂದಿದ್ದಾರೆ. ಇನ್ನು ಕೆಲವರು ಅಂದು ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಮಾತನಾಡದ ನೀವು ಈಗೇಕೆ ಮಾತನಾಡುತ್ತಿದ್ದೀರಿ ಎಂದು ಬಿ.ಎಲ್‌ ಸಂತೋಷ ಅವರನ್ನೇ ಪ್ರಶ್ನಿಸಿದ್ದಾರೆ.

Previous articleರಾಜಧಾನಿ ಸೇರಿ ವಿವಿಧಡೆ ನಾಳೆಯಿಂದ ಮಳೆ ಸಾಧ್ಯತೆ
Next articleಕೃಷ್ಣಮೃಗದ ಕೊಂಬು, ಚರ್ಮ ಮಾರಾಟ: ಓರ್ವನ ಬಂಧನ