ಪ್ರಧಾನಿ ಸ್ವಾಗತಕ್ಕೆ ಸಿಂಗಾರಗೊಂಡಿದೆ‌ ವಾಣಿಜ್ಯನಗರಿ

0
19
ಸಮಾರಂಭಕ್ಕೆ ಶೃಂಗಾರ

ಹುಬ್ಬಳ್ಳಿ: 26 ನೇ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಬ್ಬಳ್ಳಿನಗರದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ.
ಅದರಲ್ಲೂ ಪ್ರಧಾನಿ ಮೋದಿ ಅವರು ಆಗಮಿಸುವ ಮಾರ್ಗದಲ್ಲಿ ಹೆಚ್ಚಿನ ಭದ್ರತೆ ನಿಯೋಜಿಸಲಾಗಿದೆ. ರಸ್ತೆಯುದ್ದಕ್ಕೂ ಸ್ವಾಗತ ಫಲಕಗಳು ರಾರಾಜಿಸುತ್ತಿವೆ. ಗೋಕುಲ ರಸ್ತೆಯಲ್ಲಿ ರಂಗೋಲಿ ಹಾಕಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ವೃತ್ತ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ.
ಬಿಜೆಪಿ ಮಹಿಳಾ ಕಾರ್ಯಕರ್ತರು ಹಾಗೂ ಎಸ್.ಆರ್. ಬೊಮ್ಮಾಯಿ ಶಾಲೆ ಶಾಲೆ ವಿದ್ಯಾರ್ಥಿಗಳು ವಿಮಾನ ನಿಲ್ದಾಣದ ಎದುರು ರಂಗೋಲಿ ಬಿಡಿಸುವಲ್ಲಿ ನಿರತರಾಗಿದ್ದಾರೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದಿಂದ ಅಕ್ಷಯ ಪಾರ್ಕ್ ವರೆಗೂ ರಂಗೋಲಿ ಹಾಕಲಾಗುತ್ತಿದೆ. ಇನ್ನೂ ಹೆಚ್ಚು ಜನ ಸೇರುವ ಕೋರ್ಟ್ ವೃತ್ತ ಸೇರಿದಂತೆ ವಿವಿಧೆಡೆ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ದೇಸಾಯಿ ಕ್ರಾಸ್ ಬಿಡ್ಜ್ ಕೇಸರಿ ಭಾವುಟಗಳಿಂದ ಅಲಂಕಾರಗೊಂಡಿದೆ.

Previous articleಯುವಜನೋತ್ಸವ ಉದ್ಘಾಟನೆ ಕಾರ್ಯಕ್ರಮಕ್ಕೆ ಧಾವಿಸುತ್ತಿರುವ ವಿದ್ಯಾರ್ಥಿಗಳ ಗುಂಪು
Next articleದೇಶ ಹಾಗೂ ರಾಜ್ಯದ ಯುವಕರಲ್ಲಿ ಉತ್ಸಾಹ ತುಂಬಲಿದೆ: ಸಿಎಂ ಬೊಮ್ಮಾಯಿ