ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ ಆರೋಪದಲ್ಲಿ ತಮಿಳುನಾಡಿನ ಸಚಿವ ಅನಿತ ರಾಧಾಕೃಷ್ಣನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತೂತ್ತುಕುಡಿ ಜಿಲ್ಲೆಯಲ್ಲಿ ಮಾ. ೨೨ರಂದು ನಡೆದಿದ್ದ ಡಿಎಂಕೆಯ ಸಭೆಯಲ್ಲಿ ದಿವಂಗತ ಮುಖ್ಯಮಂತ್ರಿ ಕಾಮರಾಜ್ ಅವರನ್ನು ಶ್ಲಾಘಿಸುವ ಭರದಲ್ಲಿ ಪ್ರಧಾನಿ ಮೋದಿ ಬಗ್ಗೆ ಸಚಿವರು ಅತಿಕೆಟ್ಟದಾಗಿ ಮಾತನಾಡಿದ್ದಾರೆಂದು ತೂತ್ತುಕುಡಿ ಜಿಲ್ಲೆಯ ಬಿಜೆಪಿ ನಾಯಕರೊಬ್ಬರು ಮೇಘನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದೇ ವೇಳೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸತ್ಯವ್ರತ ಸಾಹೋ ಅವರಿಗೂ ಈ ವಿಷಯದಲ್ಲಿ ದೂರು ನೀಡಲಾಗಿದ್ದು ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.