ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

0
28

ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಮೊಟ್ಟಮೊದಲ ಬಾರಿಗೆ ವೃತ್ತಿಪರ ತಿರುಗಾಟ ನಡೆಸಿದ
ಪ್ರಸಿದ್ಧ ಮಹಿಳಾ ಭಾಗವತ ಲೀಲಾವತಿ ಬೈಪಡಿತ್ತಾಯ ಶನಿವಾರ ಇಹಲೋಕ ತ್ಯಜಿಸಿದ್ದಾರೆ.

ಮಂಗಳೂರು ತಾಲೂಕಿನ ಬಜಪೆಯ ತಳಕಳದ ಕಲಾನುಗ್ರಹದಲ್ಲಿ ಶನಿವಾರ ಸಂಜೆ
ಗಾನಲೀನವಾಗಿದ್ದಾರೆ. ಸುಮಾರು 40 ವರ್ಷಗಳ ಕಾಲ ಯಕ್ಷರಂಗದಲ್ಲಿ ಭಾಗವತಿಕೆಯಲ್ಲಿ
ಮಿಂಚಿದ ಗಾನಗಾರುಡಿ ಲೀಲಾವತಿ ಬೈಪಡಿತ್ತಾಯ(78) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಇವರ ಅಂತಿಮ ಸಂಸ್ಕಾರ ಡಿ.15ರಂದು ಸ್ವಗೃಹದಲ್ಲೇ ನಡೆಯಲಿದೆ.

Previous articleಪಕ್ಷದ ಬಲವರ್ಧನೆ ಹೆಸರಲ್ಲಿ ವಿಜಯೇಂದ್ರ ಬಣದ ಸಭೆ
Next articleತೆಂಕುತಿಟ್ಟು ಯಕ್ಷಗಾನದ ಮೊದಲ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ಇನ್ನಿಲ್ಲ